Saturday, December 14, 2024
Homeಚಿಕ್ಕಮಗಳೂರುಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ..!

ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ..!

ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿತಾಣ ಮುಳ್ಳಯ್ಯನಗಿರಿಗೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಿರುವಾಗ ಕೆಲ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಾರೆ. ಮುಳ್ಳಯ್ಯನಗಿರಿ ಭಾಗದಲ್ಲಿ ಮದ್ಯಪಾನ ನಿಷೇಧ ಮಾಡಿದ್ದರೂ ಬೆಂಗಳೂರು ಮೂಲದ ಪ್ರವಾಸಿಗರಿಂದ ಎಣ್ಣೆ ಪಾರ್ಟಿ ಮಾಡಲಾಗಿದೆ. ಇದನ್ನು ಪ್ರಶ್ನೆ ಮಾಡಿದ ಪ್ರವಾಸಿ ಮಿತ್ರ ಪಡೆಯ ಸದಸ್ಯರಿಗೆ ಧಮ್ಕಿ ಹಾಕಿರುವ ಘಟನೆ ನಡೆದಿದೆ. ಕದ್ದು ಮುಚ್ಚಿ ಡ್ರಿಂಕ್ಸ್ ತಂದು ಪಾರ್ಟಿ ಮಾಡುತ್ತಿದ್ದರು. ಇವರಿಂದಾಗಿ ಇನ್ನುಳಿದ ಪ್ರವಾಸಿಗರಿಗೂ ಕಿರಿಕಿರಿ ಉಂಟಾಗಿದೆ. ಸದ್ಯ ಮದ್ಯವಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular