ಮುಹಿಯ್ಯದೀನ್ ಜುಮ್ಮಾ ಮಸೀದಿ, ಬೊಳ್ಳೂರು ಇದರ ವತಿಯಿಂದ ಪ್ರವಾದಿ ಮೊಹಮ್ಮದ್ ಮುಸ್ತಫಾ(ಸ.ಅ) ಅವರ ಜನ್ಮದಿನಾಚರಣೆ ಪ್ರಯುಕ್ತ ಈದ್ ಮಿಲಾದ್ ಬೃಹತ್ ರ್ಯಾಲಿ ನೆರವೇರಿತು. ಸದರ್ ಮುಅಲ್ಲಿಮ್ ಅಬ್ದುಲ್ ನಾಸಿರ್ ಹಮ್ದಾನಿ ಅವರ ನೇತೃತ್ವದಲ್ಲಿ, ಬೊಳ್ಳೂರು ಉಸ್ತಾದ್ ಹಾಜಿ ಅಝ್ಹರ್ ಫೈಝಿ ಅವರ ದುವಾ ಆಶೀರ್ವಚನದೊಂದಿಗೆ ಈದ್ ಮೆರವಣಿಗೆಗೆ ಚಾಲನೆ ನೀಡಿದರು.
ಬೊಳ್ಳೂರು ಮಸೀದಿ ಮುಂಭಾಗದಿಂದ ಹೊರಟ ಮೆರವಣಿಗೆಯು ಹಳೆಯಂಗಡಿ ಮೂಲಕ ರಾಷ್ಟ್ರೀಯ ಹೆದ್ದಾರಿ ಪಡುಪಣಂಬೂರು ವರೆಗೆ ಸಾಗಿ ವಾಪಾಸು ಬಲ್ಲೂಬೊಳ್ಳೂರು ಮಸೀದಿ ಮುಂಭಾಗದಿಂದ ಹೊರಟ ಮೆರವಣಿಗೆಯು ಹಳೆಯಂಗಡಿ ಮೂಲಕ ರಾಷ್ಟ್ರೀಯ ಹೆದ್ದಾರಿ ಪಡುಪಣಂಬೂರುವರೆಗೆ ಸಾಗಿ ವಾಪಾಸು ಬೊಳ್ಳೂರು ಮಸೀದಿಗೆ ತಲುಪಿ ಬಳಿಕ ಮಸೀದಿಯ ಸಭಾಂಗಣದಲ್ಲಿ ಅನ್ನದಾನ ನಡೆಯಿತು.
ಮದರಸದ ಗುರುಗಳು ಮತ್ತು ಬೊಳ್ಳೂರು ಜಮಾತಿನ ಸದಸ್ಯರ ಸಹಕಾರದೊಂದಿಗೆ, ಬಿ.ಯಮ್ ಮೈಯದ್ದಿ ಮತ್ತು ಹುಸೈನಬ್ಬ ಬೊಳ್ಳೂರು ಮೆರವಣಿಗೆಯ ಉಸ್ತುವಾರಿಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಯ್ಯದ್ದಿನ್ ಜುಮ್ಮಾ ಮಸೀದಿಯ ಅಧ್ಯಕ್ಷರು ಮತ್ತು ಸದಸ್ಯರು, ಸ್ಥಳೀಯ ಪಂಚಾಯತ್ ಸದಸ್ಯರಾದ ಎಂಎ ಖಾದರ್. ಅಬ್ದುಲ್ ಅಝೀಝ್, ಹಾರಿಸ್ ನವರಂಗ್, ಅಬ್ದುಲ್ ರೆಹಮಾನ್, ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು, ಮಮ್ತಾಝ್ ಅಲಿ ಮತ್ತಿತರರು ಉಪಸ್ಥಿತರಿದ್ದರು