ಮುಲ್ಕಿ: ಹಳೆಯಂಗಡಿಯ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಮತ್ತು ಪಾತ್ವೇ ಎಂಟರ್ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಅಂಡ್ ಲೇಡೀಸ್ ಸಲೂನ್ ಸಹಯೋಗದಲ್ಲಿ ಹಳೆಯಂಗಡಿಯ ಹರಿ ಓಂ ಸಭಾಭವನದಲ್ಲಿ “ಪ್ರಿಯದರ್ಶಿನಿ ಕಿಂಗ್ ಅಂಡ್ ಕ್ವೀನ್” ಗ್ರಾಂಡ್ ಫಿನಾಲೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಶ್ರೀ ದುರ್ಗಾ ಜುವೆಲ್ಲರ್ಸ್ ಹಳೆಯಂಗಡಿಯ ರಾಜೇಶ್ವರಿ ಸೂರ್ಯ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬರ್ನಾಡ್, ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಅರಸು ಎಂಟರ್ಪ್ರೈಸಸ್‌ನ ಗೌತಮ್ ಜೈನ್ ಮುಲ್ಕಿ ಅರಮನೆ, ಪೂಜಾ ಅರೆಂಜಸರ್ಸ್‌ನ ಚಿರಾಗ್ ಕೋಟ್ಯಾನ್, ಮರ್ಸಿ ಬ್ಯೂಟಿ ಅಕಾಡೆಮಿ ಅಂಡ್ ಲೇಡೀಸ್ ಸಲೂನ್ ಆಡಳಿತ ನಿರ್ದೇಶಕರಾದ ಮರ್ಸಿ ವೀಣಾ ಡಿಸೋಜಾ, ಪಾತ್ ವೇ ಸಂಸ್ಥೆಯ ದೀಪಕ್ ಗಂಗೂಲಿ,
ಪಡುಬಿದ್ರೆ ಗ್ಲಾಮರಸ್ ಸ್ನಿಪ್ ಸೆಲೂನ್‌ನ ನಿಶಾ ಸಂದೇಶ್ ಸಾಲ್ಯಾನ್, ಕಾರ್ಯಕ್ರಮದ ಸಹ ಪ್ರಾಯೋಜಕರಾದ ಶ್ರೀ ದುರ್ಗಾ ಜುವೆಲ್ಲರ್ಸ್ ನ ಸೂರಜ್ ಆಚಾರ್ಯ ರಾಜ್ಯ ಸೇವಾ ದಳದ ಪ್ರಧಾನ ಕಾರ್ಯದರ್ಶಿ ಧರ್ಮಾನಂದ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಕಾಶ್ ಕಿನ್ನಿಗೋಳಿ ನಿರೂಪಿಸಿದರು. ತೀರ್ಪುಗಾರರಾಗಿ ಸಬಿತ ರಂಜಿತ್ ರಾವ್, ಡಾ. ಅರ್ಚನಾ ಭಟ್, ವಿದ್ಯಾ ಸಂಪತ್ ಕರ್ಕೇರ, ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಸಹಕರಿಸಿದ್ದರು.