ಮುಲ್ಕಿ: ತಾಲೂಕು ವ್ಯಾಪ್ತಿಯ ಹಳೆಯಂಗಡಿ ಗ್ರಾಮ ಪಂಚಾಯತ್ ನ ಒಂದು ವಾರ್ಡಿಗೆ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಚಿತ್ರ ಪ್ರಸನ್ನ ಕುಮಾರ್ ಭರ್ಜರಿ ಜಯಗಳಿಸಿದ್ದಾರೆ
ಚಲಾವಣೆಯಾದ ಒಟ್ಟು 556 ಮತಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸುಚಿತ್ರ ಪ್ರಸನ್ನ ಕುಮಾರ್ ರವರಿಗೆ 360 ಮತಗಳು ಹಾಗೂ ಬಿಜೆಪಿ ಬೆಂಬಲಿತ ಸುಂದರಿ ಸದಾಶಿವ 188 ಮತಗಳು ದೊರಕಿವೆ.
8 ಮತಗಳು, ಅಸಿಂಧು ಗೊಂಡಿವೆ
ಪಂಚಾಯತ್ ನ ಮಾಜೀ ಅಧ್ಯಕ್ಷೆ ಜಲಜಾ ರ ಸದಸ್ಯತ್ವ ರದ್ದಾದ ಕಾರಣ ಮರು ಚುನಾವಣೆ ನಡೆದಿತ್ತು
ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಸದಸ್ಯರು ವಿಜಯೋತ್ಸವ ಆಚರಿಸಿದರು
ನೂತನ ಸದಸ್ಯರನ್ನು ಮಾಜೀ ಸಚಿವ ಅಭಯಚಂದ್ರ ಜೈನ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ ಬರ್ನಾಡ್,ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್,ಮಾಜೀ ಪಂಚಾಯತ್ ಸದಸ್ಯ ಶಾಹುಲ್ ಹಮೀದ್ ಮತ್ತಿತರರು ಅಭಿನಂದಿಸಿದ್ದಾರೆ
ಹಳೆಯಂಗಡಿ: ಗ್ರಾಮ ಪಂಚಾಯತ್ ಉಪಚುನಾವಣೆ; ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯ
RELATED ARTICLES