ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ವತಿಯಿಂದ 6ನೇ ವರ್ಷದ ಯಕ್ಷಗಾನ ಬಯಲಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 26.01.2025 ನೇ ಭಾನುವಾರ ಶ್ರೀ ಓಂಕಾರೇಶ್ವರಿ ಮಂದಿರದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ಇದರ ಅಧ್ಯಕ್ಷರಾದ ಮೋಹನ್ ಪೂಜಾರಿಯವರು ವಹಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ದಿನಾಂಕ 22.2.2025ನೇ ಶನಿವಾರ ರಾತ್ರಿ 8.30 ಕ್ಕೆ ಓಂಕಾರೇಶ್ವರಿ ಭಜನಾ ಮಂದಿರದ ಮುಂಭಾಗದಲ್ಲಿ ಹಾಕಲ್ಪಡುವ ರಂಗಮಂಟಪದಲ್ಲಿ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ ಕಳವಾರು ಇವರಿಂದ ಮಹಿಮೆದ ಮಂತ್ರ ದೇವತೆ ಯಕ್ಷಗಾನ ಪ್ರದರ್ಶನವು ನೆರವೇರಲಿರುವುದು.
ಕಾರ್ಯಕ್ರಮದಲ್ಲಿ ಸಂಪತ್ ಜೆ ಶೆಟ್ಟಿಯವರು ಸ್ವಾಗತಿಸಿ ಹಿಮಕರ್ ಕೋಟ್ಯಾನ್ ರವರು ಧನ್ಯವಾದವನ್ನು ಅರ್ಪಿಸಿದರು ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಅಮೀನ್ ತೋಕೂರು ನಿರೂಪಿಸಿದರು.