ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ರಾಜ್ಯ ಸಮಿತಿಯ ಸರ್ವ ಸದಸ್ಯರ ಮಹಾಸಭೆಯನ್ನು ಬೆಂಗಳೂರಿನ ಜಯನಗರದ 4ನೇ ಬಡಾವಣೆಯ 36ನೇ ಅಡ್ಡ ರಸ್ತೆಯಲ್ಲಿರುವ ಸನಾತನ ಕಲಾ ಕ್ಷೇತ್ರದ ಸಭಾಂಗಣದಲ್ಲಿ ಆಗಸ್ಟ್ 4 ರಂದು ಭಾನುವಾರ ಬೆಳಿಗ್ಗೆ 10-30ಕ್ಕೆ ಕರೆಯಲಾಗಿದೆ ಎಂದು ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ವಿ.ಪ್ರವೀಣ್ ತಿಳಿಸಿದ್ದಾರೆ. ಪರಿಷತ್ತಿನ ರಾಜ್ಯಾಧ್ಯಕ್ಷರಾದ ವೈ.ಕೆ.ಮುದ್ದುಕೃಷ್ಣರವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಮಹತ್ವಪೂರ್ಣ ಸಭೆಯಲ್ಲಿ 2023-24ನೆ ಸಾಲಿನ ಪರಿಶೋಧಿತ ಆಯವ್ಯಯ ಲೆಕ್ಕಪತ್ರ ಮಂಡನೆ, ಅನುಮೋದನೆ 2024-25ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳ ಕುರಿತು ರೂಪುರೇಷೆ, ವಿಚಾರ-ವಿನಿಮಯ, ಮುಂದಿನ ಗೀತೋತ್ಸವದ ಬಗ್ಗೆ ಚರ್ಚೆ, ಕರ್ನಾಟಕದ ವಿವಿಧ ಜಿಲ್ಲೆ, ತಾಲ್ಲೂಕುಗಳ ಚಟುವಟಿಕೆ, ಜಿಲ್ಲೆ, ತಾಲ್ಲೂಕುಗಳ ನೂತನ ಘಟಕಗಳ ಸ್ಥಾಪನೆಯ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪರಿಷತ್ತಿನ ರಾಜ್ಯ ಸಮಿತಿಯ ಖಜಾಂಚಿ ಪ್ರಶಾಂತ್ ಉಡುಪ ತಿಳಿಸಿದ್ದಾರೆ.
ನಾಡಿನ ಎಲ್ಲಾ ಜಿಲ್ಲೆ, ತಾಲ್ಲೂಕುಗಳ ಘಟಕಗಳ ಅಧ್ಯಕ್ಷರುಗಳೂ ಸೇರಿದಂತೆ ಸರ್ವ ಸದಸ್ಯರು ಆಗಮಿಸಿ ಈ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ದಾವಣಗೆರೆ ಜಿಲ್ಲಾಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.