ಶ್ರೇಷ್ಠ ರಾಜಕೀಯ ಮುತ್ಸದ್ದಿ, ನವ ಉಡುಪಿಯ ನಿರ್ಮಾತೃ ಕೀರ್ತಿಶೇಷ ಡಾ! ವಿ.ಎಸ್. ಆಚಾರ್ಯ ಅವರ ಪುಣ್ಯ ಸಂಸ್ಮರಣೆಯ ಪ್ರಯುಕ್ತ ಬಿಜೆಪಿ ಉಡುಪಿ ನಗರದ ವತಿಯಿಂದ ಜಿಲ್ಲಾಧಿಕಾರಿಗಳ ಸಂಕೀರ್ಣ ರಜತಾದ್ರಿಯ ಬಳಿ ಇರುವ ಡಾ! ವಿ.ಎಸ್. ಆಚಾರ್ಯ ಅವರ ಪುತ್ಥಳಿಗೆ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅವರು ಮಾಲಾರ್ಪಣೆಗೈದು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಪ್ರಧಾನ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ. ಶೆಟ್ಟಿ, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಹರೀಶ್ ಶೆಟ್ಟಿ, ಗಿರಿಧರ ಆಚಾರ್ಯ, ಅಶೋಕ್ ನಾಯ್ಕ್, ಕಲ್ಪನಾ ಸುಧಾಮ, ಪ್ರಮುಖರಾದ ಶೈಲೇಂದ್ರ ಶೆಟ್ಟಿ, ವೀಣಾ ಎಸ್. ಶೆಟ್ಟಿ, ಮಂಜುಳಾ ಪ್ರಸಾದ್, ಆನಂದ್ ಸುವರ್ಣ, ಕಿಶೋರ್ ಕುಮಾರ್ ಕರಂಬಳ್ಳಿ, ಸಂತೋಷ್ ಆಚಾರ್ಯ, ಶ್ರಿವತ್ಸ, ನಿತಿನ್ ಪೈ, ಧನುಷ್ ಶೆಟ್ಟಿ, ಭೂಷಣ್, ಸಂತೋಷ್ ಪ್ರಭು ಮುಂತಾದವರು ಉಪಸ್ಥಿತರಿದ್ದರು.