ಮುಲ್ಕಿ: ಹಿಂದೂ ಯುವ ಸೇನೆ ಹಾಗೂ ಮಹಿಳಾ ಘಟಕದ ವತಿಯಿಂದ 26ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ಶಿವಾಜಿ ಮಂಟಪದ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಯುವ ಸೇನೆಯ ಕೇಂದ್ರ ಮಂಡಳಿಯ ಗೌರವಾಧ್ಯಕ್ಷ ಭಾಸ್ಕರ ಚಂದ್ರ ಶೆಟ್ಟಿ ವಹಿಸಿ ಮಾತನಾಡಿ ಸೇವಾ ಸಂಸ್ಥೆಗಳು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ದೇಶದ ಅಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಕೇಂದ್ರ ಮಂಡಳಿ ಅಧ್ಯಕ್ಷ ಯಶೋಧರ್ ಚೌಟ, ದ.ಕ. ಬಿಜೆಪಿ ಯುವ ಮೋರ್ಚಾದ ಭರತ್ ರಾಜ್ ಕೃಷ್ಣಾಪುರ, ಕ್ಷೇತ್ರ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಮುಲ್ಕಿ ನ.ಪಂ.ಸದಸ್ಯ ಶೈಲೇಶ್ ಕುಮಾರ್, ಉದ್ಯಮಿ ಮಧುಸೂದನ್ ಶೆಟ್ಟಿಗಾರ್ ಕಿಲ್ಪಾಡಿ, ರವಿ ಶೆಟ್ಟಿ ಕೋಟಬೇಲ್ತೂರು, ಸುರೇಶ್ ಶೆಟ್ಟಿ ಕೊಟ್ಟಾರ ಚೌಕಿ ಮಂಗಳೂರು,ಮುಲ್ಕಿ ಹಿಂದೂ ಯುವ ಸೇನೆ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು, ಪ್ರಧಾನ ಕಾರ್ಯದರ್ಶಿ, ನಿತಿನ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ದ.ಕ. ಸಂಸದ ಬ್ರಿಜೇಶ್ ಚೌಟ, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ,ಮುಲ್ಕಿ ನ.ಪಂ. ಅಧ್ಯಕ್ಷ ಸತೀಶ್ ಅಂಚನ್ ಮತ್ತಿತರರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ವಿನೋದ್ ಸಾಲ್ಯಾನ್ ಸ್ವಾಗತಿಸಿದರು, ಶಂಕರ್ ಪಡಂಗ ಧನ್ಯವಾದ ಅರ್ಪಿಸಿದರು,ಕಮಲಾಕ್ಷ ಬಡಗುಹಿತ್ಲು ನಿರೂಪಿಸಿದರು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.