Sunday, July 14, 2024
Homeಮಂಗಳೂರುಉಳ್ಳಾಲ ಕಸಾಪ ವತಿಯಿಂದ ಅಗಲಿದ ಗಣ್ಯರಿಗೆ ನುಡಿನಮನ

ಉಳ್ಳಾಲ ಕಸಾಪ ವತಿಯಿಂದ ಅಗಲಿದ ಗಣ್ಯರಿಗೆ ನುಡಿನಮನ

ಮುಡಿಪು: ಇತ್ತೀಚೆಗೆ ಅಗಲಿದ ಕನ್ನಡ ಸಾಹಿತ್ಯ ಮತ್ತು ಸಂಶೋಧನ ಕ್ಷೇತ್ರದ ಮಹನೀಯರಾದ ಡಾ.ಕಮಲಾ ಹಂಪನಾ, ಜಾನಪದ ವಿದ್ವಾಂಸ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಹಾಗೂ ಸಂಘಟಕ ರಮಾನಾಥ ಕೋಟೆಕಾರ್ ಇವರಿಗೆ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ವಿವಿಯ ಕನ್ನಡ ವಿಭಾಗದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ಬಳಿಕ ನಡೆದ ಸಭೆಯಲ್ಲಿ ಪ್ರಸ್ತುತ ವರ್ಷದ ಕಾರ್ಯಚಟುವಟಿಕೆಗಳ ರೂಪುರೇಷೆಯನ್ನು ಸಿದ್ಧಗೊಳಿಸಲಾಯಿತು. ಪರಿಷತ್ತಿನ ವತಿಯಿಂದ ಕರಾವಳಿಯ ಲೇಖಕರ ಕುರಿತ ಸರಣಿ ಕಾರ್ಯಕ್ರಮವನ್ನು ಶಾಲೆಗಳಲ್ಲಿ ನಡೆಸಲು ತೀರ್ಮಾನಿಸಲಾಯಿತು. ಇದಲ್ಲದೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಹಾಗೂ ಪರಿಷತ್ತಿನ ಸದಸ್ಯತ್ವ ಅಭಿಯಾನವನ್ನು ನಡೆಸಲು ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಉಳ್ಳಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಅಧ್ಯಕ್ಷತೆ ವಹಿಸಿದ್ದರು.ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಎಡ್ವರ್ಡ್ ಲೋಬೋ, ಕೋಶಾಧ್ಯಕ್ಷರಾದ ಲ.ಚಂದ್ರಹಾಸ ಶೆಟ್ಟಿ ದೇರಳಕಟ್ಟೆ,ಸಂಘಟನಾ ಕಾರ್ಯದರ್ಶಿ ಗಳಾದ ತ್ಯಾಗಂ ಹರೇಕಳ, ರಾಧಾಕೃಷ್ಣ ರಾವ್,ಸದಸ್ಯರುಗಳಾದ ತೋನ್ಸೆ ಪುಷ್ಕಳ ಕುಮಾರ್, ಆನಂದ ಅಸೈಗೋಳಿ,ಗುಣಾಜೆ ರಾಮಚಂದ್ರ ಭಟ್, ಅಬ್ದುಲ್ ರಹಿಮಾನ್ ಕೋಡಿಜಾಲ್,ಎಸ್ ಜಯಪ್ರಸಾದ್, ಅಚ್ಯುತ ಗಟ್ಟಿ,ಕೃಷ್ಣ ಕುಮಾರ್ ಕಮ್ಮಜೆ,ಅಮರನಾಥ್ ಪೂಪಾಡಿಕಲ್ಲ್, ಎಕೆ ಅಬ್ದುಲ್ ರಹಿಮಾನ್, ಕುಸುಮ ಪ್ರಶಾಂತ್ ಉಡುಪ, ರೇಷ್ಮಾ ನಿರ್ಮಲ ಭಟ್,ವಿಜಯಲಕ್ಷ್ಮಿ ಕಟೀಲು, ಜ್ಯೋತಿ, ರವಿಕುಮಾರ್ ಕೋಡಿ ಮತ್ತಿತರರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular