ಮೂಡುಬಿದಿರೆ: ಇಲ್ಲಿನ ಇತಿಹಾಸ ಪ್ರಸಿದ್ಧ ಸಾವಿರ ಕಂಬ ಬಸದಿಯಲ್ಲಿ ಲಕ್ಷದೀಪೋತ್ಸವ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಡಿ.25ರಂದು ನಡೆಯಲಿದೆ.
ಸಾಯಂಕಾಲ ೬.೩೫ರಿಂದ ಅಭಿಷೇಕ, ಅರತಿ, ಭಜನೆ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ೮.೪೫ಕ್ಕೆ ಭಗವಾನ್ ಚಂದ್ರನಾಥ ಸ್ವಾಮಿಗೆ ಲಕ್ಷದೀಪೋತ್ಸವ ನಡೆಯಲಿದೆ. ೭.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಸಂದರ್ಭದಲ್ಲಿ ಅಪೇಕ್ಷಾ ಪೂರ್ಣಚಂದ್ರ ಜೈನ್ ಅವರು ಹಾಡಿರುವ ಭಕ್ತಿಗೀತೆಯ ಧ್ವನಿ ಮುದ್ರಣ ಬಿಡುಗಡೆಗೊಳ್ಳಲಿದೆ. ಡಾ.ಸುಮಿತ್ ಸಿಂಗ್ ಪದಂ ಚಂಡಿಗಡ ಅವರಿಂದ ಸೀತಾರ್ ವಾದನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಡಿ.25ರಂದು ಸಾವಿರ ಕಂಬ ಬಸದಿಯಲ್ಲಿ ಲಕ್ಷ ದೀಪೋತ್ಸವ
RELATED ARTICLES