ಕಾಪು: ಉಳಿಯಾರಗೋಳಿ ಕೈಪುಂಜಾಲು ಶ್ರೀ ಬಾವು ಬಬ್ಬರ್ಯ ದೈವಸ್ಥಾನದ
ವಾರ್ಷಿಕ ನೇಮೋತ್ಸವವು ಜ.10ರಂದು ರಾತ್ರಿ ಜರುಗಲಿದೆ.
ಜ. 5ರಂದು ರಾತ್ರಿ ಗಂಟೆ 6.30ರಿಂದ ತಂಬಿಲ ಸೇವೆ, ಜ. 9 ರಾತ್ರಿ ಗಂಟೆ 6-30ರಿಂದ ಪಂಚ ದೈವಗಳ ಕೋಲ ನಡೆಯಲಿದೆ.
ಜ. 10ರಂದು ಪೂರ್ವಾಹ್ನ ಗಂಟೆ 10ಕ್ಕೆ ಚಪ್ಪರ ಮುಹೂರ್ತ ಮಧ್ಯಾಹ್ನ ಗಂಟೆ 12.30ರಿಂದ ಮಹಾ ಅನ್ನಸಂತರ್ಪಣೆ (ದೈವಸ್ಥಾನದ ವಠಾರದಲ್ಲಿ) ರಾತ್ರಿ ಗಂಟೆ 6.30ಕ್ಕೆ ಪದ್ದತಿಯಂತೆ ಶ್ರೀ ದೈವದ ಭಂಡಾರವು ಬಾವುಗುತ್ತಿನಿಂದ ದೈವಸ್ಥಾನಕ್ಕೆ ವಿಜೃಂಭಣೆಯಿಂದ ಹೊರಡಲಿರುವುದು. ರಾತ್ರಿ ಗಂಟೆ 8.30ಕ್ಕೆ ಗಗ್ಗರ ಮುಹೂರ್ತ ಮತ್ತು ಬಬ್ಬರ್ಯ ದೈವದ ನೇಮೋತ್ಸವ ನಡೆಯಲಿದೆ.
ಜ. 11 ಬೆಳಳಗ್ಗೆ ಗಂಟೆ 9ಕ್ಕೆ ನೀಚ ದೈವದ ನೇಮ, ಸೋಡ್ತಿ ಮತ್ತಿತರ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.