Monday, February 17, 2025
Homeಮಂಗಳೂರುಜ.14 ರಂದು ಸಂಘದ ಕಚೇರಿಯಲ್ಲಿ ಬಿ.ವಿ. ಪ್ರತಿಮಾ ಅವರ ನಾಮಪತ್ರ ಸಲ್ಲಿಕೆ

ಜ.14 ರಂದು ಸಂಘದ ಕಚೇರಿಯಲ್ಲಿ ಬಿ.ವಿ. ಪ್ರತಿಮಾ ಅವರ ನಾಮಪತ್ರ ಸಲ್ಲಿಕೆ

ತಣ್ಣೀರುಪoತ : ತಣ್ಣೀರುಪoತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ಜಗದೀಶ್ ಶೆಟ್ಟಿ ಮೈರ,ಜಯಾನಂದ ಕಲ್ಲಾಪು, ಸಾಮ್ರಾಟ್ ಕಲ್ಲೇರಿ, ಪ್ರಭಾಕರ ಗೌಡ ಪೋಸಂದೋಡಿ, ಸುನಿಲ್ ಗೌಡ ಅಣವು, ರೋಹಿತ್ ಕುಪ್ಪೆಟ್ಟಿ, ಹಿಂದುಳಿದ ವರ್ಗ ಎ ಕ್ಷೇತ್ರ ದಿಂದ ರಜನಿನಾಥ್ ಮುಂದಿಲ , ಹಿಂದುಳಿದ ಬಿ ಕ್ಷೇತ್ರ ದಿಂದ ಕೃಷ್ಣಪ್ಪ ಗೌಡ , ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಜಯಂತಿ ಪಾಲೇದು, ಸರೋಜಿನಿ ವಿಜಯ ಗೌಡ ಪರಿಶಿಷ್ಟ ಜಾತಿ ಕ್ಷೇತ್ರ ದಿಂದ ಶ್ರೀನಿವಾಸ್ ಅಳಕ್ಕೆ ಪರಿಶಿಷ್ಟ ಪಂಗಡದಿಂದ ಸುರೇಶ್ ಹೆಚ್. ಎಲ್ ಇವರುಗಳು
ಬಿ.ವಿ. ಪ್ರತಿಮಾ ರಿಟರ್ನಿಂಗ್ ಅಧಿಕಾರಿಯವರಿಗೆ ಜ 14 ರಂದು ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಚುನಾವಣಾ ಪ್ರಭಾರಿಗಳಾದ ಪ್ರವೀಣ್ ರೈ ಬಾರ್ಯ, ನಂದನ್ ಕುಮಾರ್, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಜೇoಕ್ಯಾರ್ , ಮಿಥುನ್ ಕುಲಾಲ್, ಶಕ್ತಿ ಕೇಂದ್ರ ಪ್ರಮುಖರು, ಜನಪ್ರತಿನಿಧಿನಗಳು, ಬೂತ್ ಸಮಿತಿ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular