ಜೂನ್ 2ರಂದು ಕರಾವಳಿ ಮಿತ್ರ ಮಂಡಳಿ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಸರ್ವ ಸದಸ್ಯರ ಮಹಾಸಭೆ

0
131

ದಾವಣಗೆರೆ: ಕರ್ನಾಟಕದ ಕರಾವಳಿ ಜಿಲ್ಲೆಗಳ ವಿಶ್ವ ವ್ಯಾಪ್ತಿಯಾದ ಅಚ್ಚ ಕನ್ನಡದ ಆರಾಧನಾ ಕಟ ಯಕ್ಷಗಾನ ಸೇರಿದಂತೆ ಕಲೆ ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಸ್ಕಾರಗಳ ಪರಂಪರೆಗಳ ಉಳಿಸಿ, ಬೆಳೆಸುವ ಸದುದ್ದೇಶದಿಂದ “ಕರಾವಳಿ ಮಿತ್ರ ಮಂಡಳಿ” ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಇದರ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ದಿನಾಂಕ 2-6-2024ನೇ ಭಾನುವಾರ ಸಂಜೆ 6 ಗಂಟೆಗೆ ದಾವಣಗೆರೆಯ ಆಂಜನೇಯ ಬಡಾವಣೆಯ ಸವಿಡೈನ್ ಸಭಾಂಗಣದಲ್ಲಿ ಸರ್ವ ಸದಸ್ಯರ ಮಹಾಸಭೆ ಕರಿಯಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಸಾಲಿಗ್ರಾಮ ಗಣೇಶ ಶೆಣೈ ತಿಳಿಸಿದ್ದಾರೆ. “ಕರಾವಳಿ ಮಿತ್ರ ಮಂಡಳಿ” ಅಂತರ್ಜಾಲ ತಾಣದಲ್ಲಿ (ವ್ಯಾಟ್ಸಪ್ ಗುಂಪಿಗೆ) ಸೇರುವ ಆಸಕ್ತರು ಹೆಚ್ಚಿನ ಮಾಹಿತಿಗೆ ಮಹೇಶ್‌ ಶೆಟ್ಟಿ 9945977433 , ಹರೀಶ್ ಶೆಟ್ಟಿ 9483963005 , ಅಂಕಿತ್ ಸತೀಶ್ 8746912345 ಇವರುಗಳನ್ನು ಸಂಪರ್ಕಿಸಬಹುದು. ಈ ತಂಡದಲ್ಲಿ ಯಾವುದೇ ಜಾತಿ, ಮತ, ಲಿಂಗ ಭೇದವಿಲ್ಲದೆ ರಾಜಕೀಯ ಪ್ರವೇಶವಿಲ್ಲದ ಈ ತಂಡದಲ್ಲಿ ಸಂಸ್ಕೃತಿ, ಸಂಸ್ಕಾರದ ಸಂಕುಚಿತ ಭಾವನೆ ಬಿಟ್ಟು ವಿಶಾಲವಾದ ಸೇವಾ ಮನೋಭಾವದವರು ಸೇರ್ಪಡೆಯಾಗಬಹುದು ಎಂದು ಮಂಡಳಿ ವಿನಂತಿಸಿದೆ.

LEAVE A REPLY

Please enter your comment!
Please enter your name here