ದಾವಣಗೆರೆ: ಬೆಳಗಾವಿ ಜಿಲ್ಲೆಯ ಬ್ಯಾಕೂಡ ಗ್ರಾಮದ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕರ ಸಂಘದ ಆಶ್ರಯದಲ್ಲಿ ಮಾರ್ಚ್ 16 ರಂದು ಧಾರವಾಡ ರಂಗಾಯಣ ಸಭಾಂಗಣದಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ತೃತೀಯ ಬಯಲಾಟ ಉತ್ಸವ ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕಳೆದ ದಶಕಗಳಿಂದ ಸಾಧನೆ ಮಾಡಿದ ದಾವಣಗೆರೆಯ ಸಾಲಿಗ್ರಾಮ ಗಣೇಶ್ಶೆ ಣೈಯವರಿಗೆ “ಕನ್ನಡ ರತ್ನ” ರಾಜ್ಯ ಪ್ರಶಸ್ತಿ ವಿತರಿಸಿ ಗೌರಸಲಾಗುವುದು ಎಂದು ಸಂಘಟನೆಯ ಅಧ್ಯಕ್ಷರಾದ ಸಿದ್ರಾಮ ಎಂ.ನಿಲಜಗಿ ತಿಳಿಸಿದ್ದಾರೆ.
ಕಲಾಕುಂಚ, ಯಕ್ಷರಂಗ, ಸಿನಿಮಾಸಿರಿ, ಶ್ರೀ ಗಾಯಿತ್ರಿ ಪರಿವಾರ, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಸಗಮ ಸಂಗೀತ ಪರಿಷತ್, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಗೌಡಸಾರಸ್ವತ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ.