
ವಿಶ್ವೇಶ್ವರ ಫ್ರೆಂಡ್ಸ್ ಟ್ರಸ್ಟ್ (ರಿ.) ಹಾಗೂ ಮಹಿಳಾ ಮಂಡಳಿ (ರಿ.) ಮೂಡುಮಾರ್ನಾಡು ವತಿಯಿಂದ ದಶಮ ವರ್ಷದ ಯುಗಾದಿ ಸಂಭ್ರಮ 2026 – ಸಮಾಜಮುಖಿ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ವೈಭವ ಮಾ.19ರಂದು ವಿಶ್ವೇಶ್ವರ ಭಜನಾ ಮಂಡಳಿ ಬಳಿಯ ಪೆಂರ್ಕಾಡಿ ಮೈದಾನದಲ್ಲಿ ನಡೆಯಲಿದೆ.
ಸಂಜೆ 6-00ರಿಂದ ಸಮಾಜಮುಖಿ ಕಾರ್ಯಕ್ರಮ – ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಸೈನಿಕರಿಗೆ ಸನ್ಮಾನ ಜರುಗಲಿದೆ.
ನವ ಚೇತನ ಸೇವಾ ಬಳಗ ತೋಡಾರು,ಬೊಲ್ಪು ಚಾರಿಟೇಬಲ್ ಟ್ರಸ್ಟ್ ಹಾಗೂ ವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್ (ರಿ.) ಮೂಡುಮಾರ್ನಾಡು ಇವರ ಆಶ್ರಯದಲ್ಲಿ ನೊಂದವರಿಗೆ ಸಹಾಯ ಹಸ್ತ ನಡೆಯಲಿದೆ.
ತದನಂತರ ಮಾರ್ನಾಡಿನ ಸರ್ವತೋಮುಖ ಅಭಿವೃದ್ಧಿಯ ಹರಿಕಾರ ರಾಘು ಸಿ.ಪೂಜಾರಿ ಮಾರ್ನಾಡ್ ಇವರಿಗೆ ಮಾರ್ನಾಡಿನ ಸೇವಾ ಕಣ್ಮಣಿ ಬಿರುದು ಪ್ರದಾನ ಮಾಡಲಾಗುವುದು.
ಸಾಂಸ್ಕೃತಿಕ ವೈಭವ : ಊರಿನ ಹಾಗೂ ಮೂಡುಬಿದಿರೆ ಪರಿಸರದ ಆಯ್ದ ಕಲಾವಿದರಿಂದ “ನಾಟ್ಯ ಸೌಂದರ್ಯ” ನಡೆಯಲಿದೆ.
ಜೀ ಕನ್ನಡ ಡ್ರಾಮಾ ಜ್ಯೂನಿಯರ್ ಸೀಸನ್ 4ರ ವಿಜೇತೆ ಸಮೃಧ್ಧಿ ಕುಂದಾಪುರ, ಅರುಣ್ ರೈ ತೋಡಾರ್ ಬಿರ್ದ್ ದ ಕಂಬಳ ಚಲನಚಿತ್ರ ನಿರ್ಮಾಪಕರು,ಜಯ ಯಾನೆ ಜಯಂತ್ ಖ್ಯಾತ ಯ್ಯೂಟ್ಯೂಬರ್ ವಿಶೇಷ ಆತಿಥಿಗಳಾಗಿ ಆಗಮಿಸಲಿರುವರು.
ಸಭಾ ಕಾರ್ಯಕ್ರಮವು ರಾತ್ರಿ 8-00ಗಂಟೆಯಿಂದ ನಡೆಯಲಿದ್ದು, ದೀಪ ಪ್ರಜ್ವಲನೆಯ ಮೂಲಕ ಉಮಾನಾಥ್ ಕೋಟ್ಯಾನ್, ಹಾಗೂ ರಾಘು ಸಿ.ಪೂಜಾರಿ ಮಾರ್ನಾಡು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿರುವರು. ರಾಜೇಶ್ ಬಲ್ಲಾಳ್ ,ಅನಂತ ಭಟ್ ದಿವ್ಯ ಉಪಸ್ಥಿತಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶೀಶ್ ಎಸ್.ಸಾಲ್ಯಾನ್ ವಹಿಸಲಿರುವರು,
ಭಾಸ್ಕರ್ ಎಸ್.ಕೋಟ್ಯಾನ್ ಸಾಧಕರನ್ನು ಸನ್ಮಾನಿಸಲಿರುವರು. ಶ್ರಿಕಾಂತ್ ಶೆಟ್ಟಿ ಕಾರ್ಕಳ ಧಾರ್ಮಿಕ ಉಪನ್ಯಾಸ ಮಾಡಲಿರುವರು. ಜಯಪ್ರಕಾಶ್ ಹಿತ್ತಿಲು ಮನೆ,ರಾಜೇಶ್ ಪೆರ್ಕಾಂಡಿ ಇವರು ಮಾಜಿ ಸೈನಿಕರನ್ನು ಸನ್ಮಾನಿಸಲಿರುವರು.
ರಂಜಿತ್ ಪೂಜಾರಿ,ಹೇಮಾರಾಜ್ ಯು.ರಾವ್ ರಾಯಮನೆ,ಪ್ರಜ್ವಲ್ ಆರ್ ಆಚಾರ್ ಸುರೇಶ್ ಶೆಟ್ಟಿ,ನಿತಿನ್ ಶೆಟ್ಟಿ ಮಾಸ್ತಿ ಕಟ್ಟೆ,ನವೀನ್ ಹಾಗೂ ಸುಬ್ಬ ರೆಡ್ಡಿ ಇವರು ಪ್ರೋತ್ಸಾಹ ಧನ ವಿತರಣೆ ಮಾಡಲಿರುವರು. ವಾಸುದೇವ ಭಟ್ ಹಾಗೂ ರಮೇಶ ಶೆಟ್ಟಿ ಪನರೊಟ್ಟು ಸಹಾಯ ಹಸ್ತ ವಿತರಣೆ ಮಾಡಲಿರುವರು.
ದೇವರಾಜ್ ಸುವರ್ಣ ಜಾರಿಗೆದಡಿ, ನನ್ನಮ್ಮ ಕವಿತಾ ರಾವ್,ಸಿ.ಎಸ್.ಕಲ್ಯಾಣಿ ಹಾಗೂ ಅಶ್ವಿನಿ ಗಣೇಶ್ ಗೌರವ ಉಪಸ್ಥಿತಲಿರುವರು. ಹಾಗೂ ಪ್ರಧಾನ ಪೋಷಕರು,ಯುಗಾದಿ ಸಂಭ್ರಮದ ಗೌರವ ಸಮಿತಿ,ಯುಗಾದಿ ಸಂಭ್ರಮದ ವ್ಯವಸ್ಥಾಪನ ಸಮಿತಿ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಉಪಸ್ಥಿತಲಿರುವರು.

ರಾತ್ರಿ ಗಂಟೆ 10.00ಕ್ಕೆ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾಬಳಗ ಇವರಿಂದ 2ನೇ ಕಲಾ ಕಾಣಿಕೆ “ಜೋಡು ಜೀಟಿಗೆ” ಸತ್ಯೋದ ಸಾದಿಗ್ ಧರ್ಮೋದ ಬೊಲ್ಪು ಎಂಬ ತುಳು ಜಾನಪದ ನಾಟಕ ನಡೆಯಲಿದೆ.
ಈ ಕಾರ್ಯಕ್ರಮದ ನೇರ ಪ್ರಸಾರವು ತುಳುನಾಡು ವಾರ್ತೆ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಳ್ಳಲಿದೆ.
