Sunday, July 14, 2024
Homeಕ್ರೀಡೆಖೋ ಖೋ ಪಂದ್ಯಾಟದಲ್ಲಿ ಎಕ್ಕಾರು ಪ್ರೌಢಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆ

ಖೋ ಖೋ ಪಂದ್ಯಾಟದಲ್ಲಿ ಎಕ್ಕಾರು ಪ್ರೌಢಶಾಲೆ ರಾಷ್ಟ್ರಮಟ್ಟಕ್ಕೆ ಆಯ್ಕೆ

ಬಜಪೆ: ಎಕ್ಕಾರಿನಂತಹ ಗ್ರಾಮೀಣ ಪ್ರದೇಶವೊಂದರ ಸರಕಾರಿ ಪ್ರೌಢಶಾಲೆ ದಕ್ಷಿಣ ಭಾರತ ವಲಯ ಚಾಂಪಿಯನ್ ಶಿಪ್ – 2024 ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ವಿದ್ಯಾರ್ಥಿಗಳ ಅಪ್ರತಿಮ ಸಾಧನೆಯಾಗಿದೆ. ಶಾಲೆಯ ಹೋಬಳಿ ಮಟ್ಟದ ಖೋ ಖೋ ಪಂದ್ಯಾಟದ ಪ್ರಯಾಣವು ಪ್ರಸ್ತುತ ವರ್ಷ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮುಖೇನ ಇತಿಹಾಸ ನಿರ್ಮಿಸಿ ಹೊಸ ಅಧ್ಯಾಯ ಸೃಷ್ಟಿಸಿದೆ ಎಂದು ಎಕ್ಕಾರು ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಶಾಲಾಭಿವೃದ್ದಿ ಸಮಿತಿ ಸದಸ್ಯ ಸುರೇಶ್ ಶೆಟ್ಟಿ ಎಕ್ಕಾರು ಹೇಳಿದರು.

ಎಚ್ ಸಿ ಎಲ್ ಫೌಂಡೇಷನ್ ವತಿಯಿಂದ ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯ ಗುಂಟೂರಿನಲ್ಲಿ ನಡೆದ ದಕ್ಷಿಣ ಭಾರತ ವಲಯ ಚಾಂಪಿಯನ್ ಶಿಪ್ 2024 ಖೋ ಖೋ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರಿನ ಬಾಲಕಿಯರ ಖೊ ಖೋ ತಂಡ, ತರಬೇತುದಾರರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲಕಿಯರ ಖೋ ಖೋ ತಂಡ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾಲತಾ ಮತ್ತು ತಂಡದ ವ್ಯವಸ್ಥಾಪಕ ಡಾ. ಅನಿತ್ ಕುಮಾರ್ ರವರನ್ನು ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.ಕ್ರೀಡಾಪಟುಗಳ ಪೋಷಕರಾದ ಭವಾನಿ, ಲಾವಣ್ಯ ಟಿ ಹೆಗಡೆ , ಬೇಬಿ, ಶೋಭಾ, ಮನೋಜ್ ಇವರನ್ನು ಅಭಿನಂದಿಸಲಾಯಿತು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸುದೀಪ್ ಅಮೀನ್, ಸದಸ್ಯರಾದ ಸುರೇಶ್ ಶೆಟ್ಟಿ, ಮೇಲ್ವಿನ್, ಸುರೇಶ್ ಕೆ , ಶ್ಯಾಮಲಾ, ಬಬಿತಾ ಶ್ರೀಮತಿ ವಿನೋದ ಪ್ರಭಾರ ಮುಖ್ಯ ಶಿಕ್ಷಕಿ ಪೂರ್ಣಿಮಾ ಎಚ್.ಎಂ. ಶಿಕ್ಷಕರಾದ ರಮ್ಯಾ, ರಾಜಶ್ರೀ ಕೆ. ಶ್ರೀಮತಿ ವಿನ್ನಿ ನಿರ್ಮಲ ಡಿ ಸೋಜಾ, ಕುಮಾರಿ ಜಯಂತಿ ಹಾಗೂ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಚಿತ್ರಾಶ್ರೀ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಗೌರಿ ಸ್ವಾಗತಿಸಿದರು ಕುಮಾರಿ ರಕ್ಷಿತಾ ವಂದಿಸಿದರು.

RELATED ARTICLES
- Advertisment -
Google search engine

Most Popular