Friday, May 23, 2025
Homeರಾಜ್ಯತಿರುಗಿಬಿದ್ದ ಸೂರಜ್‌ ರೇವಣ್ಣ ಆಪ್ತ: ತನ್ನ ಮೇಲೂ ಅಸಹಜ ಲೈಂಗಿಕ ದೌರ್ಜನ್ಯ ನಡೆದಿದೆ ಎಂದ ದೂರುದಾರ

ತಿರುಗಿಬಿದ್ದ ಸೂರಜ್‌ ರೇವಣ್ಣ ಆಪ್ತ: ತನ್ನ ಮೇಲೂ ಅಸಹಜ ಲೈಂಗಿಕ ದೌರ್ಜನ್ಯ ನಡೆದಿದೆ ಎಂದ ದೂರುದಾರ

ಹಾಸನ: ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಬಂಧಿತನಾಗಿರುವ ಎಂಎಲ್‌ಸಿ ಡಾ. ಸೂರಜ್‌ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸೂರಜ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ನೀಡಿದ್ದ ಸಂತ್ರಸ್ತನ ವಿರುದ್ಧ ದೂರು ನೀಡಿ, ಅವರನ್ನು ಬೆಂಬಲಿಸಿದ್ದ ಅವರ ಆಪ್ತ ಈಗ ತಿರುಗಿಬಿದ್ದಿದ್ದಾನೆ. ಅಲ್ಲದೆ ತನ್ನ ಮೇಲೂ ಸೂರಜ್‌ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೊಸ ದೂರು ದಾಖಲಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಸೂರಜ್‌ ರೇವಣ್ಣ ವಿರುದ್ಧ ಮತ್ತೊಂದು ಅಸಹಜ ಲೈಂಗಿಕ ಕಿರುಕುಳ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ಅರಕಲಗೂಡು ಮೂಲದ ಯುವಕನ ವಿರುದ್ಧ ದೂರು ನೀಡಲು ಸೂರಜ್‌ ರೇವಣ್ಣ ಒತ್ತಡ ಹಾಕಿದ್ದರು. ಕೊರೊನ ಸಮಯದಲ್ಲಿ ತನ್ನ ಮೇಲೂ ಇದೇ ರೀತಿಯ ಅಸಹಜ ಲೈಂಗಿಕ ದೌರ್ಜನ್ಯ ಸೂರಜ್‌ ಎಸಗಿದ್ದಾರೆ ಎಂದು ಅವರ ಆಪ್ತನೇ ದೂರಿನಲ್ಲಿ ಆಪಾದಿಸಿದ್ದಾನೆ.

RELATED ARTICLES
- Advertisment -
Google search engine

Most Popular