Wednesday, April 23, 2025
HomeUncategorizedಧರ್ಮ, ಜಾತಿಗಳಿಗಿಂತ ಮೊದಲು ಜೀವ ಉಳಿಸುವ ಬೆಲೆಯನ್ನು ತಿಳಿಯಬೇಕು: ಜೇಸಿ ತರಬೇತಿಯಲ್ಲಿ ರೇಮಂಡ್ ಡಿಕೂನಾ ತಾಕೊಡೆ

ಧರ್ಮ, ಜಾತಿಗಳಿಗಿಂತ ಮೊದಲು ಜೀವ ಉಳಿಸುವ ಬೆಲೆಯನ್ನು ತಿಳಿಯಬೇಕು: ಜೇಸಿ ತರಬೇತಿಯಲ್ಲಿ ರೇಮಂಡ್ ಡಿಕೂನಾ ತಾಕೊಡೆ

ನಮ್ಮ ಮನೆಯನ್ನು ಸ್ವಚ್ಛ ಇಡಲು ಸುತ್ತಲೂ ಆವರಣದ ಗೋಡೆ ಕಟ್ಟುವ ನಾವು ನೀರು, ಗಾಳಿ,ಮಣ್ಣು ಎಲ್ಲಾ ಜನರು ಹಂಚಿಕೊಂಡು ಬದುಕುವ ಸತ್ಯವನ್ನು ನೆನಪಿಡಬೇಕು. ನನ್ನ ಧರ್ಮ, ನಮ್ಮ ಜಾತಿಗಳು ಶ್ರೇಷ್ಠ ಮಾಡುವಾಗ ಇತರ ಜಾತಿಧರ್ಮವನ್ನು ಗೌರವದಿಂದ ನೋಡಲು ಕಲಿಯಬೇಕು. ಜಾತಿಧರ್ಮಗಳಿಗಿಂತ ಜೀವ ಒಂದು ಬದುಕಿಸುವುದು ಶ್ರೇಷ್ಠ ಕಾರ್ಯ ಎಂದು  ಝೋನ್ ಹದಿನೈದರ ಹಿರಿಯ ತರಭೇತುದಾರ ಜೇಸಿ ರೇಮಂಡ್ ಡಿಕೂನಾ ತಾಕೊಡೆ ನುಡಿದರು.

ಅವರು ಮೂಡುಬಿದಿರೆ ಜೈನ ಪ್ರೌಢಶಾಲಾ 125 ವಿಧ್ಯಾರ್ಥಿಗಳಿಗೆ ಜೀವನ ಮೌಲ್ಯಗಳ ತರಭೇತಿಯನ್ನು ನೀಡಿ ಮಾತನಾಡಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಶಾಮ್‌ಪ್ರಸಾದ್ ಕೆ ತರಭೇತಿಯನ್ನು ಚಾಲನೆ ಮಾಡಿ ನಮ್ಮ ಸಂಸ್ಥೆಯ ನಲ್ವತ್ತು ವರ್ಷಗಳ ಹಳೆಯ ವಿದ್ಯಾರ್ಥಿ ಹಿರಿಯ ಪತ್ರಕರ್ತ, ಸಾಹಿತಿ ಆಗಿ ಸಾಧನೆ ಮಾಡಿ ಇಂದಿನ ವಿದ್ಯಾರ್ಥಿಗಳು ಅನುಸರಿಸುವ ರೀತಿಯಲ್ಲಿ ಬೆಳೆದ ಬಗ್ಗೆ ಹೆಮ್ಮೆ ಇದೆ ಎಂದರು.

ವಲಯ ತರಭೇತುದಾರರಾದ ಜೇಸಿ ನಿತೇಶ್ ಬಳ್ಳಾಳ್, ಜೇಸಿ ಅಜಿತ್ ಪ್ರಸಾದ್, ಜೇಸಿ ವಿನಯ ಚಂದ್ರ ತರಭೇತಿಯನ್ನು ಮುಂದುವರೆಸಿದರು. ಹಿರಿಯ ಶಿಕ್ಷಕರಾದ ವಿನಯಚಂದ್ರ ಸ್ವಾಗತಿಸಿ ದರು. ಶಿಕ್ಷಕಿಯರಾದ ವಿಜಯ ಪದ್ಮ ಸಹಕರಿದರು. ಶಿಕ್ಷಕಿಯಾದ ಮಾಧುರಿ ವಂದಿಸಿದರು.

RELATED ARTICLES
- Advertisment -
Google search engine

Most Popular