ಬೆಂಗಳೂರು: ಬೆಂಗಳೂರಿನಲ್ಲಿ ಆನ್‌ಲೈನ್ ಹೂಡಿಕೆ ವಂಚನೆ ದಂಧೆಯನ್ನು ಉತ್ತರ ಸಿಇಎನ್ ಪೊಲೀಸರು ಭೇದಿಸಿದ್ದು, ವಂಚಕರಿಗೆ ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದ ಮೂವರು ಸೇರಿ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶ್ರೀನಿವಾಸ್ ರೆಡ್ಡಿ(43), ಆಕಾಶ್ ಜಿಎಂ(27), ಪ್ರಕಾಶ್ ಎಚ್(43), ಸುನಿಲ್ ಕುಮಾರ್(45), ಕಿಶೋರ್ ಕುಮಾರ್(29), ರವಿಶಂಕರ್(24), ಸುರೇಶ ವಿ(41) ಮತ್ತು ಬ್ಯಾಂಕ್ ಖಾತೆಯ ವಿವರ ನೀಡಿದ ಮಧುಸೂದನ ರೆಡ್ಡಿ(41), ಓಬುಲ್ ರೆಡ್ಡಿ(29) ಮತ್ತು ಸಾಯಿ ಪ್ರಜ್ವಲ್(38) ಎಂದು ಗುರುತಿಸಲಾಗಿದ್ದು, ಎಲ್ಲರೂ ಬೆಂಗಳೂರು ನಿವಾಸಿಗಳಾಗಿದ್ದಾರೆ. ಆರೋಪಿಗಳು ಆನ್‌ಲೈನ್ ಹೂಡಿಕೆ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆನ್‌ಲೈನ್ ಹೂಡಿಕೆ ವಂಚನೆ ದಂಧೆ: 10 ಮಂದಿ ಆರೋಪಿಗಳ ಬಂಧನ
RELATED ARTICLES