Saturday, December 14, 2024
Homeಬೆಂಗಳೂರುಆನ್‌ಲೈನ್‌ ರಮ್ಮಿ ಗೀಳು | ಸಾಲ ತೀರಿಸಲಾಗದೆ ಮನೆಬಿಟ್ಟು ಹೋಗಿ ನಾಪತ್ತೆಯಾದ ಬ್ಯಾಂಕ್‌ ಉದ್ಯೋಗಿ

ಆನ್‌ಲೈನ್‌ ರಮ್ಮಿ ಗೀಳು | ಸಾಲ ತೀರಿಸಲಾಗದೆ ಮನೆಬಿಟ್ಟು ಹೋಗಿ ನಾಪತ್ತೆಯಾದ ಬ್ಯಾಂಕ್‌ ಉದ್ಯೋಗಿ

ಬೆಂಗಳೂರು: ಆನ್​ಲೈನ್ ರಮ್ಮಿ ಗೀಳಿಗೆ ಬಿದ್ದ ಬ್ಯಾಂಕ್‌ ಉದ್ಯೋಗಿಯೊಬ್ಬರು 20 ಲಕ್ಷ ರೂ. ಕಳೆದುಕೊಂಡು, ಸಾಲ ತೀರಿಸಲಾಗದೆ ಮನೆಬಿಟ್ಟು ಹೋದ ಘಟನೆ ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ನಡೆದಿದೆ. ಭರತ್ ನಾಪತ್ತೆಯಾದ ಬ್ಯಾಂಕ್‌ ಉದ್ಯೋಗಿ ಎನ್ನಲಾಗಿದೆ.ಆನ್​ಲೈನ್ ರಮ್ಮಿ ಆಡಲು ಬ್ಯಾಂಕ್​ನಿಂದ 20 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದ ಭರತ್‌, ಇಎಮ್​ಐ (EMI) ಕಟ್ಟಲು ಸಾಧ್ಯವಾಗುತ್ತಿಲ್ಲವೆಂದು ಹೇಳಿ ವಿಡಿಯೋ ಮಾಡಿ ನಾಪತ್ತೆಯಾಗಿದ್ದಾರೆ.
ಸೆಲ್ಪೀ ವಿಡಿಯೋ ಮಾಡಿರುವ ಭರತ್​, ‘ನಾನು ಜೀವನದಲ್ಲಿ ಸೋತಿದ್ದೇನೆ. ನನ್ನನ್ನು ಹುಡುಕಬೇಡಿ. ನಾನು ಮನೆಬಿಟ್ಟು ಹೋಗುತ್ತಿದ್ದೇನೆಂದು ವಿಡಿಯೋ ಮಾಡಿ, ಮೊಬೈಲ್ ಮನೆಯಲ್ಲೇ ಬಿಟ್ಟು ಭರತ್ ತೆರಳಿದ್ದಾನೆ. ಸದ್ಯ ಭರತ್ ಪತ್ನಿ ಚೈತ್ರಾ ಎಂಬುವವರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದು, ಹೇಗಾದರೂ ನನ್ನ ಗಂಡನನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular