ತಿರುಮಲ ಫುಟ್ಬಾಲ್ ಕ್ಲಬ್ ತಗ್ಗರ್ಸೆ,ಬೈಂದೂರು ಇವರ ಆಶ್ರಯದಲ್ಲಿ ಅದ್ದೂರಿ 3ನೇ ವರ್ಷದ ಓಪನ್ ಟೂರ್ನಮೆಂಟ್ ಫುಟ್ಬಾಲ್- 2025 ಕಂಬಳಗದ್ದೆ ರೋಡ್ ತಗ್ಗರ್ಸೆ ಸಂಭ್ರಮದಲ್ಲಿ ನಡೆಯಿತು.
ರಾಜ್ಯದ ವಿವಿಧ ಕಡೆಗಳಿಂದ ಕೂಡ ಸರಿ ಸುಮಾರು 32 ತಂಡಗಳು ಆಗಮಿಸಿ ಕ್ರೀಡಾ ಸ್ಪೂರ್ತಿಯನ್ನು ಅಂಕಣದಲ್ಲಿ ತೋರಿಸಿದ್ದಾರೆ.ಯೂನಿಕ್ ಎಫ್ ಸಿ ಶಿರೂರು ಪ್ರಥಮ ಸ್ಥಾನವನ್ನು ಗಳಿಸಿದರೆ ದ್ವಿತೀಯ ಸ್ಥಾನವನ್ನು ಕೆಸರುಕೋಡಿ ಎಫ್ ಸಿ ಶಿರೂರು ತಮ್ಮದಾಗಿಸಿಕೊಂಡಿದ್ದಾರೆ.
ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ್ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
ಆಟಗಾರರು ಶಿಸ್ತನ್ನು ಕಾಪಾಡುವುದರ ಮೂಲಕ ಆರೋಗ್ಯಕರ ಜೀವನ ನಡೆಸುವಂತಾಗಬೇಕು. ಆಟದಲ್ಲಿ ಗೆಲ್ಲುವುದಕ್ಕಿಂತ ಪಾಲ್ಗೊಳ್ಳುವಿಕೆ ಅತಿ ಮುಖ್ಯ ಎಂದರು.
ಹರೀಶ್ ಪೂಜಾರಿ ಅವರು ಮಾತನಾಡಿ ತಿರುಮಲ ಫುಟ್ಬಾಲ್ ಕ್ಲಬ್ ಕಳೆದ ಮೂರು ವರ್ಷಗಳಿಂದ ಫುಟ್ಬಾಲ್ ಪಂದ್ಯಾಟವನ್ನು ಆಯೋಜಿಸಿದ್ದೇವೆ ವರ್ಷದಿಂದ ವರ್ಷಕ್ಕೆ ಫುಟ್ಬಾಲ್ ಪ್ರೇಮಿಗಳು ಹೆಚ್ಚಾಗುತ್ತಿದ್ದಾರೆ ಮತ್ತು ಈ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ್ ಪೂಜಾರಿ ,ನಾಗರಾಜ್ ಚಂದನ್,ಕೃಷ್ಣ ಗಾಣಿಗ, ಗಣೇಶ್ ಪೂಜಾರಿ, ಸುಧಾಕರ್ ಮೊಗವೀರ್ ,ನಾಗಪ್ಪ ಪೂಜಾರಿ, ಚಂದ್ರ ಶೆಟ್ಟಿ, ಮಹೇಂದ್ರ ಆಚಾರಿ, ಹರ್ಷ ಆಚಾರಿ, ಪ್ರಮೋದ್ ಪೂಜಾರಿ, ರಾಜು ಗಾಣಿಗ ಉಳುವಾಡಿ, ರಾಘವೇಂದ್ರ ಪೂಜಾರಿ ತಗ್ಗರ್ಸೆ, ತಿರುಮಲ ಫುಟ್ಬಾಲ್ ಕ್ಲಬ್ ಸರ್ವ ಸದಸ್ಯರು ಉಪಸ್ಥಿತರಿದ್ದರು. ರವೀಂದ್ರ ಗಾಣಿಗ ನಿರೂಪಿಸಿದರು. ರಾಘವೇಂದ್ರ ಪೂಜಾರಿ ತಗ್ಗರ್ಸೆ ಸ್ವಾಗತಿಸಿ ವಂದಿಸಿದರು.