Monday, July 15, 2024
Homeರಾಜ್ಯಕಿನ್ನಿಗೋಳಿಯಲ್ಲಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಮೂರನೇ ಶಾಖೆ ಪ್ರಾರಂಭ

ಕಿನ್ನಿಗೋಳಿಯಲ್ಲಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಮೂರನೇ ಶಾಖೆ ಪ್ರಾರಂಭ

ಹಳೆಯಂಗಡಿಯ ಸಹಕಾರಿ ಭೀಷ್ಮ ದಿವಂಗತ ಎಚ್ ನಾರಾಯಣ ಸನಿಲ್ ಮತ್ತು ಸಹಕಾರಿ ಧುರೀಣ ದಿವಂಗತ
ಪಂಜದ ಗುತ್ತುಶಾಂತರಾಮ ಶೆಟ್ಟಿ ರವರ ಪ್ರೇರಣಾ ಶಕ್ತಿಯಿಂದಾಗಿ ಪ್ರಾರಂಭಗೊಂಡ ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಮಾಜಿ ಸಚಿವರಾದ ಕೆ ಅಭಯಚಂದ್ರ ಜೈನ್ ರವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ. ಪರಿಸರದಲ್ಲಿ ಸಹಕಾರಿ ಸಾಧನೆಯನ್ನು ಮಾಡಬೇಕೆಂಬ ದೂರದೃಷ್ಟಿಯ ಸಹಕಾರಿ ತಂಡವು ಕೇವಲ ಅತ್ಯಲ್ಪ ಅವಧಿಯಲ್ಲಿ ಉತ್ತಮ ಸಾಧನೆಗೈದು ಇದೀಗ ತನ್ನ ಮೂರನೇ ಶಾಖೆಯನ್ನು ಕಿನ್ನಿಗೋಳಿ ಬೆತ್ಲೇಮ್ ಸ್ಟಾರ್ ಕಾಂಪ್ಲೇಕ್ಸ್ ನಲ್ಲಿ ದಿನಾಂಕ 31-03-2024 ರಂದು ಪ್ರಾರಂಭಿಸಲಿದ್ದಾರೆ. 2023-2024ನೇ ಸಾಲಿನಲ್ಲಿ ಅಂದಾಜು ಸುಮಾರು 195ಕೋಟಿ ರೂಪಾಯಿಗಳ ವಹಿವಾಟನ್ನು ನಿರ್ವಹಿಸಿದ್ದು, ಸ್ಥಳೀಯವಾಗಿ ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಿದೆ. 2023-24ನೇ ಸಾಲಿನಲ್ಲಿ ಉತ್ತಮ ರೀತಿಯ ಲಾಭಾಂಶದ ಗುರಿಯನ್ನು ಇಟ್ಟುಕೊಂಡಿದ್ದು, ನಿರೀಕ್ಷೆಯಂತೆ ಲಾಭಾಂಶ ಬರುವ ಎಲ್ಲಾ ಅವಕಾಶಗಳು ಇದೆ ಎಂದು ಅಂದಾಜಿಸಲಾಗಿದೆ. ಕಿನ್ನಿಗೋಳಿ ಶಾಖೆ ಬೆಳಿಗ್ಗೆ 10:30ಕ್ಕೆ ಉದ್ಘಾಟನೆಗೊಳ್ಳಲಿದ್ದು, ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿ. ಬೆಂಗಳೂರು, ಹಾಗೂ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ., ಮಂಗಳೂರು ಇದರ ಅಧ್ಯಕ್ಷರಾದ ಡಾ|| ಎಂ. ಎನ್. ರಾಜೇಂದ್ರ ಕುಮಾರ್ ನೆರವೇರಿಸಲಿದ್ದಾರೆ, ಅಧ್ಯಕ್ಷತೆಯನ್ನು ಮುಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ ಸಾವಂತರು ವಹಿಸಲಿದ್ದು, ವಿಶೇಷ ತಾರ ಆಕರ್ಷಣೆಯಾಗಿ ಭೋಜರಾಜ್ ವಾಮಂಜೂರು ಆಗಮಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಮಾಜಿ ಸಚಿವರಾದ ಕೆ. ಅಭಯಚಂದ್ರ ರವರು, ಭದ್ರತಾ ಕೊಠಡಿ
ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿಯವರು, ಪ್ರಿಯದರ್ಶಿನಿ ಸ್ವಸಹಾಯ ಗುಂಪಿಗೆ ಚಾಲನೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಮಿಥುನ್ ಎಂ ರೈ ರವರು, ಅಮೃತ ನಗದು ಪತ್ರ ಠೇವಣಿ ಬಿಡುಗಡೆಯನ್ನು ಕೊಸೆಸಾಂವ್ ಅಮ್ಮ ಚರ್ಚ್ ಕಿನ್ನಿಗೋಳಿಯ ಧರ್ಮ ಗುರುಗಳಾದ ಫಾ| ಫಾವುಸ್ತಿನ್ ಲುಕಾಸ್ ಲೋಬೋ ರವರು, ಠೇವಣಿ ಪತ್ರ ಬಿಡುಗಡೆಯನ್ನು ದುರ್ಗಾದಯ ಕಿನ್ನಿಗೋಳಿ ಇದರ ಮಾಲಕರಾದ ಸೀತಾರಾಮ ಶೆಟ್ಟಿಯವರು, ಉಳಿತಾಯ ಖಾತೆಯ ಪಾಸ್‌ಬುಕ್ ವಿತರಣೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿ., ಬೆಂಗಳೂರು ಇದರ ನಿರ್ದೇಶಕರಾದ ಡಾ|| ಐಕಳಬಾವ ದೇವಿ ಪ್ರಸಾದ್ ಶೆಟ್ಟಿಯವರು, ಮಾಸಿಕ ಠೇವಣಿ ಪತ್ರ ಬಿಡುಗಡೆಯನ್ನು ಸಿ.ಎಸ್.ಐ ಅಮ್ಮನ್ ಮೆಮೊರಿಯಲ್ ಚರ್ಚ್ ಹಳೆಯಂಗಡಿ ಇದರ ಸಭಾಪಾಲಕರಾದ ರೇ| ಅಮೃತ್ ರಾಜ್ ಖೋಡೆರವರು, ಪ್ರಥಮ ವಾಹನ ಸಾಲ ವಿತರಣೆಯನ್ನು ವ್ಯವಸ್ಥಾಪನಾ ಸಮಿತಿ, ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪಾವಂಜೆ ಇದರ ಅಧ್ಯಕ್ಷರಾದ ಬಿ. ಸರ‍್ಯ ಕುಮಾರ್ ರವರು, ನಿತ್ಯನಿಧಿ ಪಾಸ್‌ಬುಕ್ ವಿತರಣೆಯನ್ನು ಲಯನ್ ಜಿಲ್ಲಾ ಗವರ್ನರ್ – 317ಆ, ಲಯನ್ ಡಾ|| ಮೆಲ್ವಿನ್ ಡಿಸೋಜ ಪಿಒಎಈ ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ. ಮತ್ತು ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್. ಎನ್ ರಮೇಶ್‌ರವರು, ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಎಮ್. ಎಲ್. ನಾಗರಾಜ್‌ರವರು, ಇನ್ನರ್ ವಿಲ್ ಕ್ಲಬ್ ಕಿನ್ನಿಗೋಳಿ ಇದರ ಅಧ್ಯಕ್ಷರಾದ ಸವಿತಾ ಶೆಟ್ಟಿರವರು, ಖಲಿರಿಯಾ ಜುಮ್ಮಾ ಮಸೀದಿ ಗುತ್ತಕಾಡು ಇದರ ಅಧ್ಯಕ್ಷರಾದ ಶ್ರೀ ಅಬೂಬಕ್ಕರ್‌ರವರು, ಕಿನ್ನಿಗೋಳಿ ಧರ್ಮ ಕೇಂದ್ರ – ಪಾಲನಾ ಮಂಡಳಿ ಉಪಾಧ್ಯಕ್ಷರಾದ ವಿಲಿಯಂ ಡಿಸೋಜರವರು, ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷರಾದ ಪ್ರಮೋದ್ ಕುಮಾರ್‌ರವರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೈಲಾ ಸಿಕ್ವೇರಾರವರು, ಕಿನ್ನಿಗೋಳಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಟಿ. ಎಚ್ ಮಯ್ಯದ್ದಿರವರು, ದ.ಕ. ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಜಯಂತಿರವರು, ಶ್ರೀ ಕಾಳಿಕಾಂಬ ಜ್ಯುವೆಲರ್ಸ್ ನ ಮಾಲಕರಾದ ಯೋಗೀಶ್ ಆಚರ‍್ಯರವರು, ಬೆತ್ಲೇಮ್ ಸ್ಟಾರ್ ಕಾಂಪ್ಲೇಕ್ಸ್ ನ ಮಾಲಕರಾದ ಕೆ. ದೀಪಕ್ ಎ. ರೊಡ್ರಿಗಸ್‌ರವರು, ಕಟ್ಟಡದ ಮಾಲೀಕರಾದ ಗೋಪಾಲಕೃಷ್ಣ ರವರು ಆಗಮಿಸಲಿದ್ದಾರೆ ಎಂದು ಸೊಸೈಟಿ ಅಧ್ಯಕ್ಷರಾದ ಎಚ್ ವಸಂತ ಬೆರ್ನಾರ್ಡ್ ರವರು ಪತ್ರಿಕೆಗೆ ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷರಾದ ಪ್ರತಿಭಾ ಕುಳಾಯಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ನಿರ್ದೇಶಕರಾದ ಡಾ|| ಗಣೇಶ್ ಅಮೀನ್ ಸಂಕಮಾರ್, ಗೌತಮ್ ಜೈನ್, ಉಮಾನಾಥ್ ಜೆ ಶೆಟ್ಟಿಗಾರ್, ಗಣೇಶ್ ಪ್ರಸಾದ್ ದೇವಾಡಿಗ, ತನುಜಾ ಶೆಟ್ಟಿ, ವಿಜಯ ಕುಮಾರ್ ಸನಿಲ್, ಮಿರ್ಜಾ ಅಹಮ್ಮದ್, ನವೀನ್ ಸಾಲ್ಯಾನ್ ಜೊತೆಯಲ್ಲಿದ್ದರು.

RELATED ARTICLES
- Advertisment -
Google search engine

Most Popular