Sunday, July 14, 2024
Homeರಾಜ್ಯಅವಕಾಶಗಳನ್ನು ತಿರಸ್ಕರಿಸದೆ ಸ್ವಾಗತಿಸಬೇಕು: ಸುಜಿರ್ ಪ್ರಸಾದ್ ನಾಯಕ್

ಅವಕಾಶಗಳನ್ನು ತಿರಸ್ಕರಿಸದೆ ಸ್ವಾಗತಿಸಬೇಕು: ಸುಜಿರ್ ಪ್ರಸಾದ್ ನಾಯಕ್

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜ್ ಮಂಗಳೂರು ಇಲ್ಲಿನ 25 ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಸಿನರ್ಜಿ 2024 ಸಮವಯ ವಿಚಾರಧಾರೆ ಕುರಿತು ಮಾರ್ಚ್ 06 ಹಾಗೂ 07 2024 ರಂದು ಅಂತರ್ ಕಾಲೇಜ್ ಮಟ್ಟದ ವಿದ್ಯಾರ್ಥಿಗಳಿಗೆ ಉದ್ಯಮೋತ್ಸವವನ್ನು ಏರ್ಪಡಿಸಲಾಗಿದ್ದು ಇದರ ಉದ್ಘಾಟನಾ ಸಮಾರಂಭ ಬುಧವಾರ ಕಾಲೇಜ್ ಸಭಾಂಗಣದಲ್ಲಿ ಜರುಗಿತು.

ಉದ್ಯಮೋತ್ಸವದ ಉದ್ಘಾಟನೆಯನ್ನು ನಾಯಕ್ ಟ್ರೇಡರ್ಸ್ ಕೊ. ಮಂಗಳೂರು ಇದರ ಸಹ ಸಂಸ್ಥಾಪಕರಾದ ಸುಜಿರ್ ಪ್ರಸಾದ್ ನಾಯಕ್ ನೆರವೇರಿಸಿ ಮಾತನಾಡುತ್ತಾ, ಭವಿಷ್ಯದಲ್ಲಿ ಯಶಸ್ವಿ ಯುವ ಉದ್ಯಮಿಗಳಾಗಲು ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಯನ್ನು ನೀಡಿದರು. ಭವಿಷ್ಯದಲ್ಲಿ ಎದುರಾಗುವ ಅವಕಾಶಗಳನ್ನು ತಿರಸ್ಕರಿಸದೆ ಸ್ವಾಗತಿಸಬೇಕು. ಪ್ರಸ್ತುತ ವಿದ್ಯಮಾನದಲ್ಲಿ ಹೊಸತನವನ್ನು ಅನುಷ್ಠಾನಿಸದವರು ನಿಜವಾದ ಅನಕ್ಷರಸ್ಥರು, ಹೊಸತನವನ್ನು ಅರಿತು ಕಲಿತು ಅನುಷ್ಠಾನಿಸಿ ಸಮಾಜದ ತೊಂದರೆಗಳನ್ನು ಎದುರಿಸುವುದರೊಂದಿಗೆ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು” ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಕಾಮಾಕ್ಷಿ ಗ್ರೂಪ್ಸ್ ನ ಸಹ ಸಂಸ್ಥಾಪಕರಾದ ಮನೇಲ್ ಶ್ರೀಕಾಂತ್ ನಾಯಕ್ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ʼವಿದ್ಯಾಭ್ಯಾಸದ ನಂತರ ಉದ್ಯೋಗವನ್ನು ನಿಂತ ನೆಲದಲ್ಲೇ ಸ್ವತಃ ಸೃಷ್ಟಿಸಿ ಬೆಳೆಸಬೇಕುʼ. ಈ ನಿಟ್ಟಿನಲ್ಲಿ ʼಪ್ರಯತ್ನಿಸಿ ಸೋತರೆ ಅದು ಸೋಲಲ್ಲ ಪ್ರಯತ್ನಿಸದೆ ಇದ್ದರೆ ಅದು ನಿಜವಾದ ಸೋಲುʼ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅರುಣಾ ಪಿ.ಕಾಮತ್ ರವರು ಅಧ್ಯಕ್ಷತೆಯನ್ನುವಹಿಸಿ 1998 ರಿಂದ 25 ವರ್ಷಗಳ ಕಾಲ ರಾಷ್ಟ್ರ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಉದ್ಯಮೋತ್ಸವನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ. ಜೊತೆಯಲ್ಲಿ ಒಂದು ವರ್ಷ ಅಂತರರಾಷ್ಟ್ರೀಯ ಮಟ್ಟದ ಉದ್ಯಮೋತ್ಸವನ್ನು ಕೂಡ ಆಯೋಜಿಸಿದ್ದ ಸಂತೋಷದ ಕ್ಷಣವನ್ನ ಹಂಚಿಕೊಂಡರು. ವಿದ್ಯಾರ್ಥಿಗಳು ಉದ್ಯೋಗವನ್ನು ಬಯಸುವವರಾಗದೆ ಉದ್ಯೋಗವನ್ನು ಸೃಷ್ಟಿಸುವವರಾಗಬೇಕು ಎನ್ನುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಸಿನರ್ಜಿ 2024 ಸಮಯ ಇದರ ವಿದ್ಯಾರ್ಥಿ ಸಂಯೋಜಕರಾದ ಹರ್ಷ್ ಹಾಗೂ ರಾಜ್ವಿ ಉದ್ಯಮೋತ್ಸವದ ಸಂಪೂರ್ಣ ದ್ಯೇಯೋದ್ದೇಶಗಳನ್ನು ವಿವರಿಸಿದರು. ಕಾರ್ಯಕ್ರಮದ ಶಿಕ್ಷಕ ಸಂಯೋಜಕರಾದ ಡಾ.ಪ್ರಸನ್ನ ಕುಮಾರ್ ಹಾಗೂ ವೀಣಾ ಕೋಟ್ಯಾನ್ ಈ ಸಂದರ್ಭಗಳಲ್ಲಿ ಉಪಸ್ಥಿತರಿದ್ದರು. ಹಾಗೆ ವಿವಿಧ ಕಾಲೇಜಿನ ಸ್ಪರ್ಧಿಗಳು ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು. ವಿದ್ಯಾರ್ಥಿನಿಯರಾದ ಬಿಂದು ನೀರೂಪಿಸಿ ವಿನೀಷಾ ವಂದಿಸಿದರು.

RELATED ARTICLES
- Advertisment -
Google search engine

Most Popular