- ವಿವೇಕಾನಂದ ಕಾಲೇಜಿನಲ್ಲಿ ರಕ್ಷಾಬಂಧನ – ರಸಚಿಂತನ ಕಾರ್ಯಕ್ರಮ
- ಪತ್ರಿಕಾ ಮಿತ್ರರೊಂದಿಗೆ ರಕ್ಷಾ ಬಂಧನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು
ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಭವನದಲ್ಲಿ ರಕ್ಷಾಬಂಧನದ ʼರಸಚಿಂತನʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ಎಮ್. ವೆಂಕಟ್ರಮಣ ರಾವ್, ಕ್ಷೇತ್ರೀಯ ನೈತಿಕ ಆಧ್ಯಾತ್ಮಿಕ ಪ್ರಮುಖ್, ವಿದ್ಯಾಭಾರತಿ ಕರ್ನಾಟಕ ಇವರು ಭಾಗವಹಿಸಿ,” ಭಾರತವನ್ನು ವಿಶ್ವಗುರುವನ್ನಾಗಿಸಲು ಬೇಕಾದ ಚೈತನ್ಯವನ್ನು ತುಂಬಲು, ಹಿಂದುತ್ವವನ್ನು ಉಳಿಸಲು ಬೇಕಾದ ಭಾವವನ್ನು ಜಾಗೃತಗೊಳಿಸುವ ಸಂಕಲ್ಪದೊಂದಿಗೆ ನಾವು ಇಂದು ರಕ್ಷೆಯನ್ನು ಕಟ್ಟಬೇಕಿದೆ. ಭಾರತೀಯರಾದ ನಾವೆಲ್ಲರೂ ಒಂದೇ ದಾರದ ಸೂತ್ರದಲ್ಲಿ ನಮ್ಮನ್ನು ಬಂಧಿಸಿಕೊಂಡು, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ವಸ್ತುಗಳ ಬಳಕೆ, ಸ್ವಭಾಷಾ ಪ್ರೇಮ, ಭಾರತೀಯ ವೇಷಭೂಷಣ ಈ ವಿಚಾರಗಳನ್ನು ನಾವು ದೈನಂದಿನ ಜೀವನದಲ್ಲಿ ಅನುಷ್ಠಾನ ಮಾಡಿಕೊಂಡಾಗ ವಿಕಸಿತ ಭಾರತವನ್ನು ಕಾಣುವಲ್ಲಿ ನಾವು ಸಫಲರಾಗುತ್ತೇವೆ” ಎಂದು ನುಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿ ಸಂಭ್ರಮಿಸಿದರು.
ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ದೇವಿಚರಣ್‌ರೈ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಶ್ರೀಧರ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ದೇವಿಚರಣ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಶ್ರೀಧರ್ ಶೆಟ್ಟಿಗಾರ್ ವಂದಿಸಿದರು.
ಪತ್ರಿಕಾ ಮಿತ್ರರೊಂದಿಗೆ ರಕ್ಷಾ ಬಂಧನ
ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಪತ್ರಿಕಾ ಕಛೇರಿಗಳಿಗೆ ಹಾಗೂ ಪುತ್ತೂರು ಪ್ರೆಸ್ ಕ್ಲಬ್ ಗಳಿಗೆ ಭೇಟಿ ನೀಡಿ ಪತ್ರಿಕಾ ಪತಿನಿಧಿಗಳಿಗೆ ಹಾಗೂ ಕಛೇರಿ ಸಿಬ್ಬಂದಿಗಳಿಗೆ ಪತ್ರಿಕಾ ವಿತರಕರಿಗೆ ರಕ್ಷೆಯನ್ನು ಕಟ್ಟಿ ರಕ್ಷಾ ಬಂಧನ ಸಂದೇಶವನ್ನು ನೀಡಿ ಸಿಹಿತಿಂಡಿ ವಿತರಿಸಿ ಸಂಭ್ರಮಿಸಿದರು.