Sunday, July 21, 2024
Homeರಾಜ್ಯನಮ್ಮ ತುಳುನಾಡ್ ಟ್ರಸ್ಟ್ (ರಿ). ಹಾಗೂ ಕಾರ್ಕಳ ಟೈಗರ್ಸ್ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

ನಮ್ಮ ತುಳುನಾಡ್ ಟ್ರಸ್ಟ್ (ರಿ). ಹಾಗೂ ಕಾರ್ಕಳ ಟೈಗರ್ಸ್ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

ನಮ್ಮ ತುಳುನಾಡ್ ಟ್ರಸ್ಟ್(ರಿ.) ಮತ್ತು ಕಾರ್ಕಳ ಟೈಗರ್ಸ್ ಹಾಗೂ ಪೆಲಿಕ್ಸ್ ಡಿಸೋಜ ಇವರ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡ್ಡೆಯಂಗಡಿ ಮರ್ಣೆ ಅಜೆಕಾರು ಇಲ್ಲಿ ಜೂ. 7ರಂದು ನಡೆಯಿತು. ಈ ಸಂದರ್ಭದಲ್ಲಿ ನಮ್ಮ ತುಳುನಾಡ್ ಟ್ರಸ್ಟ್ ನ ಅಧ್ಯಕ್ಷ‌ರಾದ ರೋಹಿತಾಶ್ವ ರವರು ಮಾತನಾಡಿ ಸರಕಾರಿ ಶಾಲೆಯಲ್ಲಿ ಮೌಲ್ಯಯುತವಾದ ಶಿಕ್ಷಣ ದೊರೆಯುತ್ತಿದ್ದು ಶಾಲಾ ಮಕ್ಕಳಿಗೆ ದಾನಿಗಳ ನೆರವಿನಿಂದ ಪುಸ್ತಕ ಸಾಮಗ್ರಿಗಳನ್ನು ನೀಡುವುದರ ಜೊತೆಗೆ ಮಕ್ಕಳಿಗೆ ಆರ್ಥಿಕ ಹೊರೆ ಬಿಳದಂತೆ ಶಿಕ್ಷಣ ಪಡೆಯಲು ಸಹಕಾರಿ‌ಯಾಗುತ್ತಿದ್ದು ಗ್ರಾಮೀಣ ಭಾಗ ಮಕ್ಕಳ‌ಲ್ಲಿ ಕಲಿಕೆ‌ಯ ಚೈತನ್ಯ ಮೂಡಿಸುತ್ತಿದೆ ಎಂದರು.

ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳ‌ನ್ನು ಸಾವಿರ-ಲಕ್ಷಾಂತರ ರೂಪಾಯಿ ಡೋನೆಷನ್ ಕೊಟ್ಟು ಸಾಲ ಸೋಲ ಮಾಡಿ ಕಲಿಸುವ ಬದಲು ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಒಂದನೇ ತರಗತಿಯಿಂದಲೆ ಇಂಗ್ಲೀಷ್ ಭಾಷೆಯಲ್ಲಿ ಉಚಿತ ಶಿಕ್ಷಣ ಸಿಗುವಾಗ ಇದರ ‌ಸದುಪಯೋಗ ಪಡೆಯಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿ ಮಕ್ಕಳ ಭವಿಷ್ಯ ಉಜ್ವಲ‌ವಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಮ್ಮ ತುಳುನಾಡ್ ಟ್ರಸ್ಟ್(ರಿ) ಇದರ ಸ್ಥಾಪಕಧ್ಯಕ್ಷರಾದ ಸುಧಾಕರ ಶೆಟ್ಟಿ ಉಳ್ಳಾಲ್ , ಟ್ರಸ್ಟ್‌ನ ರಾಜ್ಯ ಸಂಚಾಲಕರಾದ ತುಳುನಾಡ ತುಡರ್ ಕೀರ್ತಿ ಕಾರ್ಕಳ ,ಮಿಥುನ್ ಸುವರ್ಣ , ರೋಹಿತ್,ದಯಾನಂದ ಪೂಜಾರಿ,ಮರ್ಣೆ ಪಂಚಾಯತ್ ಸದಸ್ಯ‌ರುಗಳಾದ ಕೃಷ್ಣ‌ಮೂರ್ತಿ , ರಜನಿ, ಕಾರ್ಕಳ ಟೈಗರ್ಸ್ ನ ಸದಸ್ಯರುಗಳಾದ ಪ್ರದೀಪ್ ಶೃಂಗಾರ, ಶ್ರೀ‌ನಾಥ್ ಆಚಾರ್ಯ, ರವಿಶೆಟ್ಟಿ ಕುಕ್ಕುದ ಕಟ್ಟೆ ಶಿಕ್ಷಣ ಪ್ರೇಮಿ, ಸುದಿನ ನ್ಯೂಸ್ ನ ಅರುಣ್ ಕುಮಾರ್ ,ಶಾಲಾ ಮುಖ್ಯೋಪಾಧ್ಯಾಯಿನಿಯಾದ ಜಯಂತಿ ಹೆಗ್ಗಡ್ತಿ ಹಾಗೂ ಶಾಲಾ ಶಿಕ್ಷಕ ಶ್ರೀವತ್ಸ ಹಾಗೂ ಶಿಕ್ಷಕಿ ರಕ್ಷಿತಾ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular