Thursday, May 1, 2025
Homeಅಂತಾರಾಷ್ಟ್ರೀಯಬರೋಬ್ಬರಿ 4.50 ಲಕ್ಷ ಗೂಬೆಗಳನ್ನು ಕೊಲ್ಲಲು ಮುಂದಾದ ಸರ್ಕಾರ | ಯಾಕೆಂದು ತಿಳಿದರೆ ಅಚ್ಚರಿಯಾದೀತು!

ಬರೋಬ್ಬರಿ 4.50 ಲಕ್ಷ ಗೂಬೆಗಳನ್ನು ಕೊಲ್ಲಲು ಮುಂದಾದ ಸರ್ಕಾರ | ಯಾಕೆಂದು ತಿಳಿದರೆ ಅಚ್ಚರಿಯಾದೀತು!

ವಾಷಿಂಗ್ಟನ್:‌ ಗೂಬೆಗಳ ಬಗ್ಗೆ ನಮ್ಮ ದೇಶದಲ್ಲಿ ನಾನಾ ಕತೆಗಳಿವೆ. ಚಿಕ್ಕ ಮಕ್ಕಳನ್ನು ಹೆದರಿಸುವುದಕ್ಕೆ ಗೂಬೆ ದೊಡ್ಡ ಅಸ್ತ್ರವಾಗಿ ಉಪಯೋಗಕ್ಕೆ ಬರುತ್ತದೆ. ಆದರೆ ಇಲ್ಲೊಂದು ದೇಶ ತನ್ನಲ್ಲಿರುವ ಬರೋಬ್ಬರಿ 4.50 ಲಕ್ಷ ಗೂಬೆಗಳನ್ನು ಗುಂಡಿಟ್ಟು ಕೊಲ್ಲಲು ಕರಡು ಸಿದ್ಧಪಡಿಸಿದೆ. ಬಾರ್ಡ್‌ ಜಾತಿಯ ಗೂಬೆಗಳನ್ನು ಕೊಲ್ಲಲು ಅಮೆರಿಕ ದೇಶ ನಿರ್ಧರಿಸಿದೆ.
ಕೀನ್ಯಾ ದೇಶ ತನ್ನಲ್ಲಿದ್ದ ಸುಮಾರು 10 ಲಕ್ಷ ಭಾರತೀಯ ಮೂಲದ ಕಾಗೆಗಳನ್ನು ಕೊಲ್ಲುವುದಾಗಿ ಘೋಷಿಸಿತ್ತು. ಈಗ ಅಮೆರಿಕ ತನ್ನ ದೇಶದಲ್ಲಿನ ಬಾರ್ಡ್‌ ಜಾತಿಯ ಗೂಬೆಗಳನ್ನು ಕೊಲ್ಲಲು ಮುಂದಾಗಿದೆ. ಯಾಕೆಂದರೆ, ಅಮೆರಿಕ ಮೂಲದ ಸ್ಟಾಟೆಡ್‌ ಗೂಬೆಗಳು ಅಳಿವಿನಂಚಿನಲ್ಲಿವೆ. ಬಾರ್ಡ್‌ ಗೂಬೆಗಳು ಹೆಚ್ಚಿದುದರಿಂದ ಸ್ಪಾಟೆಡ್‌ ಗೂಬೆಗಳ ಅಳಿವು ಆಗುತ್ತಿದೆ. ಹೀಗಾಗಿ ಬಾರ್ಡ್‌ ಗೂಬೆಗಳನ್ನು ಹೊಡೆದುರುಳಿಸಲು ಶೂಟರ್‌ಗಳನ್ನು ನಿಯೋಜಿಸಲು ಅಮೆರಿಕ ಚಿಂತಿಸಿದೆ.

RELATED ARTICLES
- Advertisment -
Google search engine

Most Popular