ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗ್ರಾಮೀಣ ಯುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡಲಾಗುತ್ತಿರುವ ಪ್ರತಿಷ್ಠಿತ ಪ.ಗೋ. (ಪದ್ಯಾಣ ಗೋಪಾಲಕೃಷ್ಣ) ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಯಮಗಳು
*ದಕ್ಷಿಣ ಕನ್ನಡ, ಉಡುಪಿ,ಉತ್ತರ ಕನ್ನಡ,ಕೊಡಗು, ಚಿಕ್ಕಮಗಳೂರು ಹಾಗೂ ಕಾಸರಗೋಡು ಜಿಲ್ಲೆಯ ಕಾರ್ಯನಿರತ ಪತ್ರಕರ್ತರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
*ಅರ್ಜಿ ಸಲ್ಲಿಸುವವರ ವಯಸ್ಸು 45 ಮೀರಿರಬಾರದು. *ಗ್ರಾಮೀಣ ಮತ್ತು ಅಭಿವೃದ್ಧಿಪರ ವರದಿಗಳನ್ನು ಮಾತ್ರ ಪರಿಗಣಿಸಲಾಗುವುದು.
*ಪ್ರಶಸ್ತಿ 10,001 ರೂ. ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ.
*2024ನೇ ಸಾಲಿನ ಪ್ರಶಸ್ತಿಗೆ 2024ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ವರದಿಗಳಿಗೆ ಸೀಮಿತವಾಗಿರುತ್ತದೆ.*ಒಬ್ಬರಿಗೆ ಎರಡು ವರದಿಗಳನ್ನು ಮಾತ್ರ ಕಳುಹಿಸಲು ಅವಕಾಶ ಇರುತ್ತದೆ.
*ಒಂದು ಬಾರಿ ಪ್ರಶಸ್ತಿ ಪಡೆದವರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
*ಒಬ್ಬರಿಗೆ ಅತ್ಯುತ್ತಮ ಎರಡು ವರದಿಗಳನ್ನು ಪ್ರಶಸ್ತಿಗಾಗಿ ಕಳುಹಿಸಲು ಅವಕಾಶ ಇದೆ.
*ಪ್ರಶಸ್ತಿಗಾಗಿ ಅರ್ಜಿಸಲ್ಲಿಸುವವರು ವರದಿಯ ನಾಲ್ಕು ಪ್ರತಿಗಳನ್ನು(ಒಂದು ಮೂಲಪ್ರತಿ ಕಡ್ಡಾಯ) ಸಲ್ಲಿಸಬೇಕು.
* ವರದಿಯಲ್ಲಿ ವರದಿಗಾರರ ಬೈಲೈನ್ ಪ್ರಕಟಗೊಂಡಿರಬೇಕು
* ಅರ್ಜಿಯೊಂದಿಗೆ ಭಾವಚಿತ್ರವಿರುವ ಸ್ವವಿವರವನ್ನು ಸಲ್ಲಿಸತಕ್ಕದ್ದು.
*ಅರ್ಜಿಗಳನ್ನು ಕಳುಹಿಸಲು 2025 ಏ.5 ಕೊನೆಯ ದಿನ.
ಅರ್ಜಿ ಸಲ್ಲಿಸಬೇಕಾದ ವಿಳಾಸ: ಪ್ರಧಾನ ಕಾರ್ಯದರ್ಶಿ , ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ಭವನ, ಉರ್ವ ಮಾರ್ಕೆಟ್ ರಸ್ತೆ ,ಮಂಗಳೂರು -6
-ಜಿತೇಂದ್ರ ಕುಂದೇಶ್ವರ
ಪ್ರಧಾನ ಕಾರ್ಯದರ್ಶಿ
ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ