ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ( ರಿ ) ನೂತನವಾಗಿ ಮಾ 1 ರಂದು ಉದ್ಘಾಟನೆಗೊಂಡಿತ್ತು, ಸಂಸ್ಥೆಯ ಖಜಾಂಚಿ ಅಧಿಕಾರ ಸ್ವೀಕರಿಸದ ಪರ್ವ ಕಾಲದಲ್ಲಿ ಈ ಸಂಸ್ಥೆಯ ಹುಟ್ಟು ಹಾಕುವಲ್ಲಿ ಪ್ರಮುಖರಾದ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಧ್ಯಾಯ ವೃತ್ತಿಯಲ್ಲಿ ಪ್ರಸಿದ್ಧ ಸಿವಿಲ್ ಇಂಜಿನಿಯರ್ ರಾಗಿದ್ದು ಗುತ್ತಿಗೆದಾರಾಗಿ ನೂರಾರು ಮನೆ ಕಟ್ಟಡ ನಿರ್ಮಿಸಿದ್ದಾರೆ , ಪ್ರವೃತ್ತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ , ಸುಗಮ ಸಂಗೀತ ಕ್ಷೇತ್ರದಲ್ಲಿ ಜ್ಯೂಯ್ನಿಯರ್ ವಿದ್ಯಾಭೂಷಣ ರೆಂದು ಪ್ರಸಿದ್ಧ ಪಡೆದು ತನ್ನದ್ದೇ ಸಂಸ್ಥೆಯ ಮುಖಂತರ 500 ಕ್ಕೂ ಹೆಚ್ಚಿನ ಕಡೆ ಕಾರ್ಯಕ್ರಮ ನೀಡಿ ಸಾಧನೆ ಮಾಡಿದ್ದೀರಿ, ಹಲವು ಕಲೆಗಳಲ್ಲಿ ಪರಿಣಿತಿ ಯಲ್ಲಿ ಯಕ್ಷಗಾನ ದ ಚಂಡೆವಾದನ , ಛಾಯಾ ಚಿತ್ರಗಾರರಾಗಿ ,ವಿವಿಧ ಸಂಘ ಸಂಸ್ಥೆ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜ ಸೇವೆ ಸಲ್ಲಿಸಿದ್ದೀರಿ ನಿಮ್ಮ ವಿಶಿಷ್ಟ ಸೇವೆಯನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ , ಹೂವು, ಹಾರ , ಸ್ಮರಣಿಕೆ ನೀಡಿ , ಅಭಿನಂದನೆ ಪತ್ರ ನೀಡಿ ಗೌರವಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ ಪೂಜಾರಿ , ಎಮ್ ಐ ಟಿ ಯಾ ಇಂಜಿನಿಯರ್ , ಪ್ರೊ ಕಿರಣ್ ಕಾಮತ್ , ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು , ಇಂಜಿನಿಯರ್ ನೀಲಕಂಠ ಎಮ್ ಹೆಗ್ಡೆ , ಇಂಜಿನಿಯರ್ ಕೆ ಎಮ್ ಮೋಹನರಾಜ್ , ಸಂಸ್ಥೆಯ ಅಧ್ಯಕ್ಷರಾದ ಕೆ ರಂಜನ್ , ಕಾರ್ಯದರ್ಶಿ ಕೆ ಹರೀಶ್ , ಗಣೇಶ್ ಬೈಲೂರು ,ಭರತ್ ಭೂಷಣ , ಅನಂತೇಶ್ ಆರ್ ಆಚಾರ್ಯ , ಮಹಾಬಲೇಶ್ವರ ಭಟ್ , ಸಂಘದ ವಿವಿಧ ಪಧಾದಿಕಾರಿಗಳು ಉಪಸ್ಥರಿದ್ದರು.