Thursday, September 12, 2024
Homeಬೆಳ್ತಂಗಡಿಪದ್ಮುಂಜ ಶ್ರೀ ವಿಷ್ಣು ಅಸೋಸಿಯೇಟ್ಸ್, ಗ್ರಾಮ ಒನ್, ಶ್ರೀ ವಿಷ್ಣು ಡಿಜಿಟಲ್ ಸೇವಾ ಕೇಂದ್ರದಲ್ಲಿ ,...

ಪದ್ಮುಂಜ ಶ್ರೀ ವಿಷ್ಣು ಅಸೋಸಿಯೇಟ್ಸ್, ಗ್ರಾಮ ಒನ್, ಶ್ರೀ ವಿಷ್ಣು ಡಿಜಿಟಲ್ ಸೇವಾ ಕೇಂದ್ರದಲ್ಲಿ , ಇ -ಸ್ಟ್ಯಾಂಪ್ (ಠಸೆ) ಪೇಪರ್ ಸೇವೆಯ ಶುಭಾರoಭ, ವಿಶೇಷ ಸಾಧಕರಿಗೆ ಸನ್ಮಾನ

ಪದ್ಮುಂಜ: ಕಣಿಯೂರು ಗ್ರಾಮದ ಪದ್ಮುಂಜ ಶ್ರೀ ವಿಷ್ಣು ಅಸೋಸಿಯೇಟ್ಸ್, ಗ್ರಾಮ ಒನ್, ಶ್ರೀ ವಿಷ್ಣು ಡಿಜಿಟಲ್ ಸೇವಾ ಕೇಂದ್ರದಲ್ಲಿ , ಇ -ಸ್ಟ್ಯಾಂಪ್ (ಠಸೆ) ಪೇಪರ್ ಸೇವೆಯ ಶುಭಾರoಭ, ವಿಶೇಷ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಪದ್ಮುಂಜ ಸಿ.ಎ ಬ್ಯಾಂಕ್ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ನಡೆಯಿತು. ಪದ್ಮುಂಜ ಸಿ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ಇ ಸ್ಟ್ಯಾಂಪ್ ಗೆ ಚಾಲನೆ ನೀಡಿ ಶುಭಹಾರೈಸಿದರು, ಗೌರವ ಉಪಸ್ಥಿತರಾಗಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿ ಎ ಬ್ಯಾಂಕ್ ಮೆನೇಜರ್ ಶ್ರೀಮತಿ ಅಂಕಿತಾ, ಪದ್ಮುಂಜ ಕೆನರಾ ಬ್ಯಾಂಕ್ ಮೆನೇಜರ್ ರೂಪೇಶ್, ತಣ್ಣೀರುಪoತ ಸಿ ಎ ಬ್ಯಾಂಕ್ ಅಧ್ಯಕ್ಷರಾದ ಜಗದೀಶ್ ಮೈರ, ಪದ್ಮುಂಜ ಸಿ ಎ ಬ್ಯಾಂಕ್ ಮಾಜಿ ಅಧ್ಯಕ್ಷರಾದ ರಾಜೀವ್ ರೈ, ಉದಯ್ ಮೇಲಾoಟ,ಪ್ರಗತಿಪರ ಕೃಷಿಕ ಯುವ ಉದ್ಯಮಿ ದೇವಿಪ್ರಸಾದ್ ಕಡಮ್ಮಾಜೆ ಫಾರ್ಮ್ಸ್, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯೋಗದಲ್ಲಿ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ ಯೋಗ ಗುರು ಕುಶಾಲಪ್ಪ ಗೌಡ, ನಿವೃತ್ತ ಯೋಧರಾದ ಗಣೇಶ್ ಶೆಟ್ಟಿ ಪದ್ಮುಂಜ, ರಾಜ್ಯಮಟ್ಟದ ಕ್ರೀಡಾಪಟು ಕು. ತೇಜಶ್ವಿನಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಸಾಹಿತಿ ಚಂದ್ರಹಾಸ ಕುಂಬಾರ, ಇವರಿಗೆ ಸನ್ಮಾನಿಸಲಾಯಿತು,
ಹಲವಾರು ಗಣ್ಯರು,ಹಿತೈಷಿಗಳು,ಗ್ರಾಹಕರು ಆಗಮಿಸಿ ಶುಭಹಾರೈಸಿದರು.
ಮಾಲಕರಾದ ವಕೀಲ ಉದಯ ಬಿ.ಕೆ, ಪತ್ನಿ ಶ್ರೀಮತಿ ಸುಚಿತ್ರ ಉದಯ ಬಿ.ಕೆ, ಸಹೋದರರು, ಕಚೇರಿ ಸಹಾಯಕರಾದ ದುರ್ಗೇಶ್, ಶ್ರೀಮತಿ ಪೂರ್ಣಿಮ ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು,ಗ್ರಾಹಕರನ್ನು ಸತ್ಕರಿಸಿ ಉಪಚರಿಸೀದರು.

RELATED ARTICLES
- Advertisment -
Google search engine

Most Popular