ಧರ್ಮ ಬಂಧು ಪಡoಗಡಿ ನೇಮಿರಾಜ ಹೆಗಡೆ ನಿವೃತ್ತ ದೈಹಿಕ ಶಿಕ್ಷಕರು ಮಹಾವೀರ ಕಾಲೇಜು ಮೂಡಬಿದರೆ ಇವರು ಇಂದು 26.11.24ರಂದು ನಮ್ಮನ್ನು ಅಗಲಿದ್ದಾರೆ. ಅವರಿಗೆ 84ವರ್ಷ ಪ್ರಾಯ ಎರಡು ಮಗಳನ್ನು ಪಡೆದ ಅವರಿಗೆ ಕೆಲವು ವರ್ಷ ಹಿಂದೆ ಪತ್ನಿ ವಿಯೋಗವಾಗಿತ್ತು. ದೇಹ ನಶ್ವರ ಆತ್ಮ ಶಾಶ್ವತ
ಶ್ರೀಯುತರು ಜೈನ ಧರ್ಮದ ಪೂಜೆ ಕ್ಷೇತ್ರ ದರ್ಶನ ಮಹಾ ಮಸ್ತಕಾಭಿಷೇಕ ಪಂಚ ಕಲ್ಯಾಣ ಆರಾಧನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು ಅವರು ಇತ್ತೀಚಿಗೆ ಗಿರಿನಾರ್ ಸಿದ್ಧಕ್ಷೇತ್ರ ದರ್ಶನ ಮಾಡಿ ಸಂತೋಷ ದಿಂದ ಮರಳಿದ್ದರು ಇಂದು ಕೂಡ ಬೆಳಿಗ್ಗೆ ದೈನಂದಿನ ವ್ಯಾಯಾಮ ನಡಿಗೆಯಲ್ಲಿ ಪಾಲ್ಗೊಂಡು ಆರಾಮ ವಾಗಿದ್ದರು ಎಂದು ತಿಳಿದು ಬಂದಿದೆ ಅಗಲಿದ ಅವರ ಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿಯಾಗಲಿ ಅವರ ಅಗಲುವಿಕೆ ಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿ ಶ್ರೀ ಜಿನೇಶ್ವರ ಭಗವಂತ ನೀಡಲಿ ಎಂದು
ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಸಂತಾಪ ಸೂಚಿಸಿದ್ದಾರೆ.
ಪಡoಗಡಿ ನೇಮಿರಾಜ ಹೆಗಡೆ ನಿಧನ
RELATED ARTICLES