Sunday, July 14, 2024
Homeಉಡುಪಿಪಡು ಅಲೆವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ಎ.15ರಂದು ಮಹಾರಥೋತ್ಸವ

ಪಡು ಅಲೆವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ಎ.15ರಂದು ಮಹಾರಥೋತ್ಸವ

ಉಡುಪಿ : ಪಡು ಅಲೆವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಎ. 12ರಿಂದ ಎ. 17ರ ವರೆಗೆ ವಾರ್ಷಿಕ ಮಹಾರಥೋತ್ಸವ ನೆರವೇರಲಿದೆ.

ಎ.13ರ ಬೆಳಗ್ಗೆ 7.30ರಿಂದ ಧ್ವಜಾರೋಹಣ, ಮಹಾಭಿಷೇಕ, ಮಹಾಪೂಜೆ, ರಾತ್ರಿ 7ರಿಂದ ಆರಾಧನೆ ಪೂಜೆ, ಉತ್ಸವ ಬಲಿ, ರಂಗಪೂಜೆ, ಭೂತಬಲಿ, ಎ. 14ರ ಬೆಳಗ್ಗೆ 6.30ರಿಂದ ಮಹಾಪೂಜೆ, ರಾತ್ರಿ 7ರಿಂದ ಆರಾಧನೆ ಪೂಜೆ, ಉತ್ಸವ ಬಲಿ, ಸವಾರಿ ಕಟ್ಟೆಪೂಜೆ, ಭುಜಂಗಬಲಿ, ಎ. 15ರ ಬೆಳಗ್ಗೆ 9.30ರಿಂದ ಮಹಾಭಿಷೇಕ, ಮಹಾಪೂಜೆ, 11ಕ್ಕೆ ರಥಾರೋಹಣ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 7.15ಕ್ಕೆ ಆರಾಧನೆ ಪೂಜೆ, 7.45ಕ್ಕೆ ಮಹಾರಥೋತ್ಸವ, ಭೂತಬಲಿ, ಕವಾಟ ಬಂಧನ ನಡೆಯಲಿದೆ.

ಎ. 16ರ ಸೂರ್ಯೋದಯಕ್ಕೆ ಕವಾಟೋದ್ಘಾಟನೆ, ಪ್ರಸನ್ನ ಪೂಜೆ, ಭಕ್ತರಿಂದ ತುಲಾಭಾರ ಸೇವೆ, ರಾತ್ರಿ 7ರಿಂದ ಆರಾಧನೆ ಪೂಜೆ, ಸಂಹಾರ ಬಲಿ, ತೀರ್ಥ ಯಾತ್ರಾಗಮನ, ಅವನೃಥ ಸ್ನಾನ, ಪೂರ್ಣಾಹುತಿ, ಧ್ವಜಾವರೋಹಣ. ಎ. 17ರಂದು ಸಂಪ್ರೋಕ್ಷಣೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಕೃಷ್ಣರಾಜ ಭಟ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular