ಪಡು ಬಸದಿ ವಾರ್ಷಿಕೋತ್ಸವ ದಿನಾಂಕ 24.5.24ಶುಕ್ರವಾರ
ಪ.ಪೂಜ್ಯ ಜಗದ್ಗುರು ’ ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜೀ
ನೇತೃತ್ವ, ಪಾವನ ಸಾನ್ನಿಧ್ಯದಲ್ಲಿ ಜರುಗಿತು.
ಬೆಳಿಗ್ಗೆ ತೋರಣ ಮಹೂರ್ತ, ವಿಮಾನ ಶುದ್ದಿ ಮಧ್ಯಾಹ್ನ ಶ್ರೀ ಜಿನ ಮುಖ ವಸ್ತ್ರ ಉದ್ಘಾಟನೆ. ಅಪರಾಹ್ನ ಕೆ. ಅಭಯಚಂದ್ರ ಜೈನ್, ಮಾಜಿ ಸಚಿವರು, ಬ್ರಹ್ಮ ದೇವರ ಆರಾಧನೆ ನೆರವೇರಿಸಿ ದರು ಸಂಜೆ 6.00ರಿಂದ ಬ್ರಹ್ಮ ದೇವರ ಉತ್ಸವ ಭಗವಾನ್ ಅನಂತ, ಧರ್ಮ ವಿಮಲಾ ನಾಥ ಸ್ವಾಮಿ 24ಕಲಶ ಅಭಿಷೇಕ, ಸರಸ್ವತಿ, ಪದ್ಮಾವತಿ ದೇವಿ,ಕ್ಷೇತ್ರ ಪಾಲ ನಾಗ ದೇವರ ಷೋಡಶ ಉಪಚಾರ ಪೂಜೆ ನೆರವೇರಿತು. ಆಶೀರ್ವಾದ ನೀಡಿದ ಸ್ವಾಮೀಜಿ ವಾರ್ಷಿಕೋತ್ಸವದ ಸಂಧರ್ಭ ಭಗವಂತ ರ ಸಮವಸರಣದ ಧರ್ಮ ಸಭೆ ಯ ಸಂದೇಶ ದ ಸ್ಮರಣೆ ಭಕ್ತಿ ಪೂಜೆ ನೆರವೇರುದು ನಮ್ಮ ಒಳ್ಳೆ ಯ ಸಭ್ಯ ಸದಾಚಾರ ಗುಣಗಳಿಂದ ನಾವು ಸುಖ ಶಾಂತಿ ನೆಮ್ಮದಿಯಾಗಿ ಬಾಳ ಬಹುದು ಕ್ರಿ ಪೂ 3ನೇ ಶತಮಾನದ ಪೂರ್ವ ದಲ್ಲೆ ನಿರ್ಮಾಣವಾದ ಮೂಡು ಬಿದಿರೆ ಯ ಗುರು ಪೀಠ ಪ್ರಾರಂಭ ದಲ್ಲಿ ಇದೆ ಪಡು ಬಸದಿಯಿಂದ ಆರಂಭವಾಗಿತ್ತು ಇಲ್ಲೆ ಕಲ್ಲ ಮರಿಗೆ ಯಲ್ಲಿ ಭಗವಂತ ರ ಹಿಂಭಾಗ ದ ಚಿಕ್ಕ ಕೊಠಡಿಯಲ್ಲಿ ಸಾವಿರಾರು ತಾಡಾ ಓಲೆ ಗ್ರಂಥ 1940ರ ಸುಮಾರಿಗೆ ಕಂಡು ಹಿಡಿದು ಶ್ರೀ ಮಠ ದ ರಮಾ ರಾಣಿ ಶೋದ ಸಂಸ್ಥಾನದಲ್ಲಿ ಇರಿಸಿ ಶೋದ ಕಾರ್ಯ ನಿರಂತರ ನಡೆಯುತ್ತಿದೆ ಕ್ಷೇತ್ರದ ಪ್ರಗತಿಗೆ ಸರ್ವ ರ ಸಹಕಾರ ಇರಲಿ ಎಂದು ನುಡಿದರು ವ್ಯ ವ ಸ್ಥಾಪಕ ಸಂಜಯಂತ ಕುಮಾರ್ ಸ್ವಾಗತಿಸಿದರು.
ಪಟ್ಟಣ ಶೆಟ್ಟಿ ಸುದೇಶ್, ದಿನೇಶ್ ಆದರ್ಶ್ ಬಸದಿ ಮುಕ್ತೇಸರರು,ಶೈಲೇo ದ್ರ ಜೈನ್ ಶಂಭವ್, ಕುಲದೀಪ, ಬಾಹುಬಲಿ ಪ್ರಸಾದ್ ಅಶೋಕ್ ಕೊಡಿ ಪಾಡಿ, ನಾಗ ವರ್ಮ ಪ್ರತಾಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಅರ್ಚಕ ಅರವಿಂದ್ ಹಾಗೂ ಸಹ ಪುರೋಹಿತರು ಪೂಜೆ ಆರಾಧನೆ ಶ್ರೀ ಗಳ ಮಾರ್ಗದರ್ಶನ ದಲ್ಲಿ ನೆರವೇರಿಸಿದರು.