ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ ಪ್ರಿಯದರ್ಶಿನಿ ಕೋ-ಅಪರೇಟಿವ್ ಸೊಸೈಟಿ
ಪಡುಬಿದ್ರಿ ಶಾಖೆಯ ಎರಡನೇ ವರ್ಷಾಚರಣೆನೆಯ ಅಂಗವಾಗಿ ಪ್ರಿಯದರ್ಶಿನಿ ಕೋ-ಅಪರೇಟಿವ್ ಸೊಸೈಟಿ ನಿ. ಬಡ ಕುಟುಂಬಗಳ ಅಂಗವಿಕಲರಿಗೆ ಉಚಿತವಾಗಿ ವೀಲ್ ಚೆರ್ ಪಡುಬಿದ್ರಿ ಶಾಖೆಯಲ್ಲಿ ಸಾಂಕೇತಿಕವಾಗಿ ವಿತರಣೆ ನಡೆಸಿದ್ದು, ಮುಂದಿನ ದಿನದಲ್ಲಿ ಇದರ ಅಗತ್ಯವಿದ್ದವರು ಪಡುಬಿದ್ರಿ ಶಾಖೆಯನ್ನು ಸಂಪರ್ಕಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಅಧ್ಯಕ್ಷ ಎಚ್. ವಸಂತ ಬರ್ನಾರ್ಡ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಬ್ಯಾಂಕ್ ಪಡುಬಿದ್ರಿ ಶಾಖಾ ಪ್ರಬಂಧಕ ಪ್ರವೀಣ್ ಕುಮಾರ್, ಪ್ರಿಯದರ್ಶಿನಿ ಕೋ-ಅಪರೇಟಿವ್ ಸೊಸೈಟಿ ನಿಸ್ವಾರ್ಥ ಸೇವೆಯಿಂದ ಜನಮನ ಗೆಲ್ಲುವ ಮೂಲಕ ಉತ್ತಮ ಸಂಸ್ಥೆಯಾಗಿ ಮೂಡಿ ಬಂದಿದೆ. ಬ್ಯಾಂಕಿನ ಲಾಭಾಂಶದಲ್ಲಿ ದೀನರ ಧ್ವನಿಯಾಗಿ ಈ ರೀತಿಯ ಸಮಜೋಮುಖಿ ಕೆಲಸಗಳನ್ನು ಮಾಡುವುದು ಇತರ ಸಂಘ-ಸಂಸ್ಥೆಗಳಿಗೆ ಮಾದರಿ ಎಂದರು.
ಈ ಸಂದರ್ಭ ಮುಖ್ಯ ಅಥಿತಿಯಾಗಿ ಪಡುಬಿದ್ರಿ ರೋಟರಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷೆ ಗೀತಾ ಅರುಣ್, ಮಾತೃ ಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್, ನಿರ್ದೇಶಕರುಗಳಾದ ಉಮಾನಾಥ ಜೆ ಶೆಟ್ಟಿಗಾರ್ ಶಾಖಾ ಪ್ರಬಂಧಕಿ ಪ್ರಜ್ಞಾಶ್ರೀ ಚಿರಾಗ್ ಇದ್ದರು.