Tuesday, January 14, 2025
Homeಪಡುಬಿದ್ರಿಪಡುಬಿದ್ರಿ: ಸಾಲಬಾಧೆ ತಾಳಲಾರದೆ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಪಡುಬಿದ್ರಿ: ಸಾಲಬಾಧೆ ತಾಳಲಾರದೆ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಪಡುಬಿದ್ರಿ: ಸಾಲಬಾಧೆ ತಾಳಲಾರದೆ ಮೂರು ತಿಂಗಳ ಹಿಂದೆ ವಿದೇಶದಿಂದ ಬಂದಿದ್ದ ವ್ಯಕ್ತಿಯೊಬ್ಬರು ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಪಡುಬಿದ್ರಿ ಬೇಂಗ್ರೆ ರಸ್ತೆಯ ಕೌಸರ್ ಮಂಜಿಲ್‌ ನಸ್ರುಲ್ಲಾ(29) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ತಿಳಿದು ಬಂದಿದೆ.

ನಸ್ರುಲ್ಲಾ ಅವರು ಪಡೆದಿದ್ದ ಮನೆ ಸಾಲ, ವೈಯಕ್ತಿಕ ಸಾಲಗಳನ್ನು ಹಿಂತಿರುಗಿಸಲು ಹಣಕಾಸು ಸಂಸ್ಥೆಯ ಮಂದಿ ಹುಡುಕಿಕೊಂಡು ಇವರ ಮನೆಗೆ ಬರುತ್ತಿದ್ದರು. ತಮ್ಮ ಪತ್ನಿಯ ಆಭರಣಗಳನ್ನೂ ಅಡವಿಟ್ಟಿದ್ದರು.
ನುಲ್ಲಾ ಅವರು ಬುಧವಾರ ಕೆಲ ಚಿನ್ನಾಭರಣಗಳನ್ನು ಬಿಡಿಸಿಕೊಂಡು ಬಂದಿದ್ದರು. ಸಂಜೆಯ ವೇಳೆ ಪತ್ನಿಯೊಂದಿಗೆ ಜಗಳವಾಡಿ, ತನ್ನ ಕೋಣೆಯೊಳಗೆ ತೆರಳಿ ಬಾಗಿಲು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular