ಶಾಸಕ ಸುನಿಲ್ ಕುಮಾರ್ ಭೂಮಿ ಪೂಜೆ – ಹಂತಹಂತವಾಗಿ ಅಭಿವೃದ್ಧಿ ಕಾರ್ಯ – ಸುನಿಲ್ ಕುಮಾರ್.
ಪಡುಕುಡೂರು : ವರಂಗ ಗ್ರಾಮದ ಪಡುಕುಡೂರು ಖಜಾನೆ ಮುಖ್ಯರಸ್ತೆಯು 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಶಾಸಕ ಸುನಿಲ್ ಕುಮಾರ್ ಭಾನುವಾರ ಭೂಮಿಪೂಜೆ ನೆರವೇರಿಸಿದರು.
ಜನರ ಬೇಡಿಕೆಯಂತೆ ಆದ್ಯತೆಯಲ್ಲಿ ಈ ಭಾಗದಲ್ಲಿ ಅಭಿವೃದ್ಧಿ ಕೆಲಸ ನಡೆದಿದೆ. ಪಡುಕುಡೂರು ಪರಿಸರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗಿದೆ, ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುವುದಾಗಿ ಶಾಸಕ ಸುನಿಲ್ ಕುಮಾರ್ ಹೇಳಿದರು. ಪಡುಕುಡೂರು ಶ್ರೀ ಭದ್ರಕಾಳಿ ದೇವಸ್ಥಾನದ ಅರ್ಚಕ ಸೂರಿಮಣ್ಣು ಸದಾಶಿವ ಉಪಾಧ್ಯಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಮುಖಂಡರಾದ ಮುನಿಯಾಲು ದಿನೇಶ ಪೈ, ಶಂಕರ ಶೆಟ್ಟಿ ಪಡುಕುಡೂರು, ಪ್ರಮುಖರಾದ ಖಜಾನೆ ಸಂದೇಶ ಶೆಟ್ಟಿ, ಜ್ಯೋತಿ ಹರೀಶ ಪೂಜಾರಿ, ಹರೀಶ ಪೂಜಾರಿ, ಜಗದೀಶ ಹೆಗ್ಡೆ ಪಡುಕುಡೂರು, ಭಾಸ್ಕರ ಶೆಟ್ಟಿ ಪಡುಕುಡೂರು, ಪ್ರಸನ್ನ ಶೆಟ್ಟಿ ಜಯಲೀಲಾ, ಎಂ.ಡಿ.ಅಧಿಕಾರಿ ಯೂತ್ ಕ್ಲಬ್ ಅಧ್ಯಕ್ಷ ಸಂದೀಪ ಶೆಟ್ಟಿ, ರತ್ನಾಕರ ಪೂಜಾರಿ ಸೇರಿದಂತೆ ಸ್ಥಳೀಯ ಪ್ರಮುಖರು, ಮುಖಂಡರು ಉಪಸ್ಥಿತರಿದ್ದರು.

