Thursday, July 25, 2024
Homeಮೂಡುಬಿದಿರೆಪಡುಮಾರ್ನಾಡು: ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತ ಆರೋಗ್ಯ ತಪಾಸಣೆ

ಪಡುಮಾರ್ನಾಡು: ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತ ಆರೋಗ್ಯ ತಪಾಸಣೆ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ಮೂಡುಬಿದಿರೆ ತಾಲೂಕು ಇದರ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ಕಣ್ಣಿನ ತಪಾಸಣಾ ಶಿಬಿರವು ಪಡುಮಾರ್ನಾಡು ಯುವಕ ಮಂಡಲದಲ್ಲಿ ನಡೆಯಿತು.
ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ ಸುನೀತಾ ನಾಯ್ಕ್ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ನಾವು ಅರೋಗ್ಯವಾಗಿದ್ದರೆ ನಮ್ಮ ಜೀವನ ಸಾರ್ಥಕ ಆಗುತ್ತದೆ.ನಾವು ಏನನ್ನು ಬೇಕಾದರೂ ಸಾದಿಸಬಹುದು. ಅರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಿದರು.

ಪಂಚಾಯತ್ ಸದಸ್ಯ, ಯುವಕ ಮಂಡಲದ ಮಾಜಿ ಅಧ್ಯಕ್ಷ ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮೌಂಟ್ ರೋಸರಿ ಆಸ್ಪತ್ರೆ ಯ ವೈದ್ಯಧಿಕಾರಿ ಡಾಕ್ಟರ್ ಸ್ವಪ್ನ ರೈ ಯವರು ಮಾತನಾಡಿ ಒಂದು ಮನೆಯ ಮಹಿಳೆ ಆರೋಗ್ಯ ವಾಗಿದ್ದರೆ ಇಡೀ ಕುಟುಂಬ ವೆ ಆರೋಗ್ಯವಾಗಿರಲು ಸಾಧ್ಯ ಎಂದರು. ಪ್ರಸಾದ್ ನೇತ್ರಲಾಯದ ಸಂಪರ್ಕಧಿಕಾರಿ ನಿಶ್ಚಿತ್ ಶೆಟ್ಟಿ ಯವರು ಆಸ್ಪತ್ರೆಯ ಉಚಿತ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಯತೀಂದ್ರ, ಯುವಕ ಮಂಡಲದ ಅಧ್ಯಕ್ಷ ಸಂದೀಪ್ ಆಚಾರ್ಯ, ಪ್ರಜ್ಞಾ ಯುವತಿ ಮಂಡಲದ ಅಧ್ಯಕ್ಷೆ ಸುಗುಣ, ಅಮನೊಟ್ಟು ಒಕ್ಕೂಟ ಒಕ್ಕೂಟದ ಅಧ್ಯಕ್ಷ ಸುರೇಂದ್ರ ಕುಮಾರ್, ವಸಂತಿ, ನಿವೃತ್ತ ಮುಖ್ಯೋಪಾಧ್ಯಾಯ ಜಯ ಬಿ, ಜ್ಞಾನವಿಕಾಸದ ತಾಲೂಕು ಸಮನ್ವಯಾಧಿಕಾರಿ ವಿದ್ಯಾ, ವಲಯ ಮೇಲ್ವೀಚಾರಕ ವಿಠ್ಠಲ್, ಸೇವಾ ಪ್ರತಿನಿಧಿ ಉಷಾ ಕಿರಣ ಸೇವಾ, ಹಾಗು ಇತರ ವೈದ್ಯಾಧಿಕಾರಿಗಳು, ಉಪಸ್ಥಿತರಿದ್ದರು.

ಮೌಂಟ್ ರೋಸರಿ ಆಸ್ಪತ್ರೆ ಅಲಂಗಾರು ಇಲ್ಲಿಯ ತಜ್ಞ ವೈದ್ಯರುಗಳಿಂದ ಬಿಪಿ, ಶುಗರ್, ಸಾಮಾನ್ಯ ಖಾಯಿಲೆ ತಪಾಸಣೆ ನಡೆಸಲಾಯಿತು. ಕಣ್ಣು ತಪಾಸಣೆ ನಡೆಸಿ ಸರ್ಜರಿ ಅಗತ್ಯ ಇದ್ದವರಿಗೆ ಪ್ರಸಾದ್ ನೇತ್ರಾಲಯ ಸಹಯೋಗದಲ್ಲಿ ಶೇ 50ರ ದರದಲ್ಲಿ ಚಿಕಿತ್ಸೆ ನೀಡಲಾಯಿತು. ಸುಮಾರು 84 ಮಂದಿ ಶಿಬಿರದ ಪ್ರಯೋಜನ ಪಡೆದು ಕೊಂಡರು.

RELATED ARTICLES
- Advertisment -
Google search engine

Most Popular