Monday, January 13, 2025
Homeಮುಲ್ಕಿಪಡುಪಣಂಬೂರು: ಡಿ. 22ರಂದು ಮುಲ್ಕಿ ಸೀಮೆ ಅರಸು ಕಂಬಳ

ಪಡುಪಣಂಬೂರು: ಡಿ. 22ರಂದು ಮುಲ್ಕಿ ಸೀಮೆ ಅರಸು ಕಂಬಳ

ಮುಲ್ಕಿ: ಪಡುಪಣಂಬೂರಿನಲ್ಲಿ ಡಿ. 22ರಂದು ಬೆಳಗ್ಗೆ 10ಕ್ಕೆ ಮುಲ್ಕಿ ಸೀಮೆ ಅರಸು ಕಂಬಳ ಆರಂಭವಾಗಲಿದೆ.
ಅಂದು ಬೆಳಗ್ಗೆ 9ಕ್ಕೆ ಸಮಾರಂಭವನ್ನು ವಿಶ್ರಾಂತ ನ್ಯಾಯಧೀಶರು, ಸುಪ್ರೀಂಕೋಟ್‌ ಮತ್ತು ನಿವೃತ್ತ ಲೋಕಾಯುಕ್ತರಾದ ಎನ್‌.ಸಂತೋಷ್‌ ಹೆಗ್ಡೆ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಉಮಾನಾಥ ಕೋಟ್ಯಾನ್‌ ವಹಿಸಲಿದ್ದಾರೆ. ಈ ವೇಳೆ ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಸ್ಥಾನದ ಮುಕ್ತೇಸರರಾದ ವೈ.ವಿ.ಗಣೇಶ್‌ ಭಟ್‌ ಹಳೆಯಂಗಡಿ ಸಿ.ಎಸ್‌.ಐ. ಅಮೃನ್‌ ಮೆಮೋರಿಯಲ್‌ ಚರ್ಚ್‌ನ ಸಭಾ ಪಾಲಕರಾದ ರೇ.ಫಾ.ಅಮೃತ್‌ರಾಜ್‌ ಖೋಡೆ, ಐಕಳ ಕಿರಂ ಚರ್ಚ್‌ನ ಧರ್ಮಗುರು ರೇ.ಫಾ. ಓಸ್‌ವಾಲ್ಡ್‌ ಮೊಂತೇರೋ, ಹಳೆಯಂಗಡಿ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಪಿ.ಎ.ಅಬ್ದುಲ್‌ಜೈನಿ ಬಡಗನ್ನೂರು ಭಾಗವಹಿಸಲಿದ್ದಾರೆ.
ಸಂಜೆ 5 ಗಂಟೆಗೆ ಸಭಾಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಸ್ಪೀಕರ್‌ ಯು.ಟ.ಖಾದರ್‌ ವಹಿಸಲಿದ್ದಾರೆ. ಈ ವೇಳೆ ಸಹಕಾರ ರತ್ನ ಎಂ.ಎನ್‌.ರಾಜೇಂದ್ರಕುಮಾರ್‌, ಕನ್ಯಾನ ಸದಾಶಿವ ಶೆಟ್ಟಿ ಇವರು ಸನ್ಮಾನಗೊಳ್ಳಲಿರುವರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಜಿಲ್ಲಾಧಿಕಾರಿ ಮುಲ್ಲೈಮುಹಿಲನ್‌, ಸಂಸದರಾದ ಬ್ರಿಜೇಶ್‌ ಚೌಟ, ತೇಜಸ್ವಿಸೂರ್ಯ, ಶಾಸಕರದ ಉಮಾನಾಥ ಕೋಟ್ಯಾನ್‌, ಮಂಜುನಾಥ ಭಂಡಾರಿ, ಕಿಶೋರ್‌ಕುಮಾರ್‌ ಬಿ.ಆರ್‌., ಯಶ್‌ಪಾಲ್‌ ಸುವರ್ಣ, ಸುನೀಲ್‌ಕುಮಾರ್‌, ಪ್ರಿಯಾಕೃಷ್ಣ, ಸಿ.ಟಿ.ರವಿ, ನಯನಾ ಮೊಟಮ್ಮ, ಆಳ್ವಾಸ್‌ ಪ್ರತಿಷ್ಠಾನದ ಅಧ್ಯಕ್ಷ ಮೋಹನ್‌ ಆಳ್ವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಆಲಿ, ಮಾಜಿ ಸಚಿವ ಅಭಯಚಂದ್ರ ಜೈನ್‌ ಮತ್ತಿತರರು ಭಾಗವಹಿಸಲಿದ್ದಾರೆ.
ಡಿ.23ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಹೊಟೇಲ್‌ ವುಡ್‌ಸೈಡ್‌ ಮಂಗಳೂರು ಇದರ ಆಡಳಿತ ನಿರ್ದೇಶಕರಾದ ಎಚ್‌.ಭಾಸ್ಕರ ಕೋಟ್ಯಾನ್‌ ಹಳೆಯಂಗಡಿ ವಹಿಸಲಿದ್ದಾರೆ. ಈ ವೇಳೆ ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷೆ ಕುಸುಮಾಚಂದ್ರಶೇಖರ್‌, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ, ಕೆಮ್ರಾಲ್‌ ಗ್ರಾ.ಪಂ. ಅಧ್ಯಕ್ಷ ಮಯ್ಯದಿ ಪಕ್ಷಿಕೆರೆ, ಬಳಕುಂಜೆ ಗ್ರಾ.ಪಂ. ಅಧ್ಯಕ್ಷೆ ಮಮತಾ ಪೂಂಜಾ, ಚೆಳ್ಯಾರು ಗ್ರಾ.ಪಂ. ಅಧ್ಯಕ್ಷ ಜಯಾನಂದ್‌, ಕಿಲ್ಪಾಡಿ ಗ್ರಾ.ಪಂ. ಅಧ್ಯಕ್ಷ ವಿಕಾಸ್‌ ಶೆಟ್ಟಿ, ಐಕಳ ಗ್ರಾ.ಪಂ. ಅಧ್ಯಕ್ಷ ದಿವಾಕರ್‌ ಚೌಟ, ಅತಿಕಾರಿಬೆಟ್ಟು ಗ್ರಾ.ಪಂ. ಅಧ್ಯಕ್ಷ ಶಶಿಕಲಾ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular