ಮುಲ್ಕಿ: ಮಣಿಪಾಲ್ ಪೇಮೆಂಟ್ ಮತ್ತು ಐಡೆಂಟಿಟಿ ಸೊಲ್ಯೂಷನ್ಸ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಪಡುಪಣಂಬೂರು ಶ್ರೀ ಉಮಾಮಹೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ನೇತೃತ್ವದಲ್ಲಿ ಹಣಕಾಸು ಸಾಕ್ಷರತೆ, ಸೋಲಾರ್ ಜೀವನೋಪಾಯ ಸೌಲಭ್ಯದ ಮಾಹಿತಿ ಕಾರ್ಯಕ್ರಮ ಪಡುಪಣಂಬೂರು ಸಂಜೀವಿನಿ ಕಟ್ಟಡದಲ್ಲಿ ನಡೆಯಿತು.
ಶ್ರೀ ಉಮಾ ಮಹೇಶ್ವರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗೀತಾ ಗಣೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಲು ಸೇವಾ ಸಂಸ್ಥೆಗಳು ಸಹಕಾರಿ ಎಂದರು. ಶಾಂಭವಿ ಸಂಜೀವಿನಿ ತಾಲೂಕು ಮಟ್ಟದ ಅಧ್ಯಕ್ಷೆ ಭಾನುಮತಿ ಶೆಟ್ಟಿ ಮಾತನಾಡಿ ಮಹಿಳೆಯರು ಎಲ್ಲಾ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರ ಹಾಗೂ ಬ್ಯಾಂಕ ಸೌಲಭ್ಯ ಪಡೆಯಬೇಕು ಎಂದು ಕರೆ ನೀಡಿದರು.
ಭಾರತೀಯ ವಿಕಾಸ ಟ್ರಸ್ಟ್ ನ ಕಾರ್ಯಕ್ರಮ ವ್ಯವಸ್ತಾಪಕ ರಾದ ಜೀವನ್ ಕೊಲ್ಯ ಮಾತಾಡಿದರು
ಆರ್ಥಿಕ ಸಾಕ್ಷರತೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಲತೇಶ್ ಬಿ,ಸೌರ ಶಕ್ತಿ ಜೀವನೋಪಾಯ ಗಳ ಬಗ್ಗೆ ಹಾಗೂ ಸಂಜೀವ್ ರವರು ಮಾಹಿತಿ ನೀಡಿದರು. ಪಂಚಾಯತ್ ಅಧ್ಯಕ್ಷೆ ಕುಸುಮ ಚಂದ್ರಶೇಖರ್, ಪಂಚಾಯತ್ ಕಾರ್ಯದರ್ಶಿ ಸುಜಾತಾ, ಎನ್ ಆರ್ ಎಲ್ ಎಂ ತಾಲೂಕು ಅಧಿಕಾರಿ ಪ್ರಜ್ವತ ವೇದಿಕೆಯಲ್ಲಿ ಇದ್ದರು. ಮೋನಿಕಾ ಸ್ವಾಗತಿಸಿ, ಪದ್ಮಪ್ರಿಯ ಧನ್ಯವಾದಗೈದರು.