ಉಡುಪಿ: ಪೈಯಾರು ಶ್ರೀ ಮಾಸ್ತಿಯಮ್ಮ ದೇವಸ್ಥಾನವು ಜೀರ್ಣೋದ್ದಾರಗೊಂಡಿದ್ದು ಬ್ರಹ್ಮ ಕುಂಭಾಭಿಷೇಕ ಮೇ 3ರಂದು ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆ ಲೋಕಾರ್ಪಣೆಯನ್ನು ದೇವಸ್ಥಾನದ ಗೌರವಾಧ್ಯಕ್ಷ ನಾರಾಯಣ ನಾಯ್ಕ ಪೈಯಾರು ನೆರವೇರಿಸಿದರು. ಅಧ್ಯಕ್ಷ ಗಣೇಶ್ ನಾಯ್ಕ ಪೈಯಾರು, ಉಪಾಧ್ಯಕ್ಷ ‘ಜಗದೀಶ್ ನಾಯ್ಕ ಕಾರ್ಯದರ್ಶಿ ಗಿರೀಶ್ ನಾಯ್ಕ, ಕೋಶಾಧಿಕಾರಿ ವಸಂತ ನಾಯ್ಕ, ಸುರತ್ಕಲ್ ಸತ್ಯಸಾಯಿ ಸೇವಾ ಕ್ಷೇತ್ರದ ಮೇಲ್ವಿಚಾರಕರಾದ ಕಮಲಾಕ್ಷ ರಂಜನಿ ಪೈಯಾರ್, ಅರ್ಚಕ ಮಾಧವ ನಾಯ್ಕ್ ಧನರಾಜ್ ನಾಯ್ಕ್ ಸುರೇಂದ್ರ ನಾಯ್ಕ್, ನಿತ್ಯಾನಂದ ನಾಯ್ಕ್ ಮಹಿಳಾ ಸಂಘದ ಗೌರವಧ್ಯಕ್ಷೆ ಲಲಿತಾ ಮಾಧವ ನಾಯ್ಕ್ ಅಧ್ಯಕ್ಷೆ ಭಾಗೀರಥಿ ಶಿವ ನಾಯ್ಕ್ ಮಲ್ಲಾರ್, ಕಾರ್ಯಾಧ್ಯಕ್ಷೆ ಅಕ್ಕಮ್ಮ ಕೃಷ್ಣ ನಾಯ್ಕ್ ಉಪಸ್ಥಿತರಿದ್ದರು.