Friday, March 21, 2025
Homeಅಂತಾರಾಷ್ಟ್ರೀಯಹಿಂದೂಗಳ ದೇವಾಲಯ, ಆಸ್ತಿ ಲೂಟಿ ಮಾಡಿ ಪಾಕಿಸ್ತಾನ ನಿರ್ಮಾಣ: ವ್ಯಾಪಕ ಚರ್ಚೆಗೆ ಕಾರಣವಾಯಿತು ಪಾಕ್‌ ಪತ್ರಕರ್ತನ...

ಹಿಂದೂಗಳ ದೇವಾಲಯ, ಆಸ್ತಿ ಲೂಟಿ ಮಾಡಿ ಪಾಕಿಸ್ತಾನ ನಿರ್ಮಾಣ: ವ್ಯಾಪಕ ಚರ್ಚೆಗೆ ಕಾರಣವಾಯಿತು ಪಾಕ್‌ ಪತ್ರಕರ್ತನ ಹೇಳಿಕೆ

ಇಸ್ಲಾಮಾಬಾದ್:‌ 1947ರಲ್ಲಿ ಹಿಂದೂಗಳ ದೇವಾಲಯಗಳನ್ನು ಲೂಟಿ ಮಾಡಿ, ಅವರ ಆಸ್ತಿಗಳನ್ನು ವಶಪಡಿಸಿಕೊಂಡು ಪಾಕಿಸ್ತಾನ ನಿರ್ಮಿಸಲಾಗಿದೆ ಎಂದು ಪಾಕ್‌ನ ಹಿರಿಯ ಪತ್ರಕರ್ತ ಇಮ್ರಾನ್‌ ಶಫ್ಕತ್‌ ಹೇಳಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನ ಫಾರ್‌ ಇಸ್ಲಾಂ ಎಂಬುದನ್ನು ಪ್ರಶ್ನಿಸಿರುವ ಅವರು ಈ ಹೇಳಿಕೆ ನೀಡಿದ್ದಾರೆ. ಇದೀಗ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ಕುರಿತು ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯ ವಿಡಿಯೋ ವೈರಲ್‌ ಆಗಿದೆ.
ತಮ್ಮ ಯೂ ಟ್ಯೂಬ್‌ ಚಾನೆಲ್‌ ಟೆಲ್ಲಿಂಗ್ಸ್‌ ವಿತ್‌ ಇಮ್ರಾನ್ ಶಫ್ಕತ್‌ನಲ್ಲಿ ಅವರು ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಪಾಕ್‌ ಸ್ಥಾಪನೆ ಕುರಿತಂತೆ ಶಫ್ಕತ್‌ ಅನೇಕ ಗಮನಾರ್ಹ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನ ರಚಿಸಿದ ಮೊದಲ ದಿನ ಅದನ್ನು ಇಸ್ಲಾಂ ಹೆಸರಿನಲ್ಲಿ ಮಾಡಲಾಯಿತು ಎಂಬುದೆಲ್ಲಾ ಸುಳ್ಳು. ಕೇವಲ ಇಸ್ಲಾಮಿಕ್‌ ತತ್ವಗಳ ಮೇಲೆ ಪಾಕಿಸ್ತಾನವನ್ನು ಸೃಷ್ಟಿಸಲಾಗಿದೆ ಎಂಬ ನಿರೂಪಣೆಯು ತಪ್ಪು ದಾರಿಗೆಳೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ರಚನೆಯಾದ ಸ್ವಲ್ಪ ಸಮಯದ ಬಳಿಕ ಲಾಹೋರ್‌ನಲ್ಲಿ ಮುಸ್ಲಿಮರು ದೇವಸ್ಥಾನ ಪ್ರವೇಶಿಸಿದ್ದಾರೆ. ವಿಗ್ರಹಗಳನ್ನು ಕದ್ದಿದ್ದಾರೆ. ಹಿಂದೂ ಒಡೆತನದ ಅಂಗಡಿಗಳು ಮತ್ತು ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ದೇವಾಲಯದ ಬೀಗಗಳನ್ನು ಒಡೆದು ವಿಗ್ರಹಗಳನ್ನು ಕದ್ದಿರುವ ಮುಸ್ಲಿಮರು, ಹಿಂದೂ ಅಂಗಡಿಗಳನ್ನು ಕೂಡ ವಶಕ್ಕೆ ಪಡೆದಿದ್ದರು. ಇದು ಪಾಕ್‌ನ ಅಡಿಪಾಯವಾಗಿದೆ ಎಂದು ಅವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular