ಅಹ್ಮದಾಬಾದ್: ಗುಜರಾತ್ ನ ಕರಾವಳಿಯಲ್ಲಿ 602 ಕೋಟಿ ರೂ. ಮೌಲ್ಯದ 86 ಕೆ.ಜಿ. ನಿಷಿದ್ಧ ಮಾದಕ ದ್ರವ್ಯಗಳೊಂದಿಗೆ 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳ ಮತ್ತು ನಾರ್ಕೋಟಿಸ್ಟ್ ಕಂಟ್ರೋಲ್ ಬ್ಯೂರೋ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳು ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಎಟಿಎಸ್ ಮತ್ತು ಎನ್ ಸಿಬಿ ಗುಜರಾತ್ ಕರಾವಳಿ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದ ವೇಳೆ ಅನುಮಾನಾಸ್ಪದ ಬೋಟ್ ಕಂಡು ತಡೆಯಲು ಮುಂದಾಗಿದೆ. ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಅಧಿಕಾರಿಗಳ ಮೇಲೆ ಬೋಟ್ ಹತ್ತಿಸಲು ಯತ್ನಿಸಿದ್ದಾರೆ. ಈ ವೇಳೆ ಅಧಿಕಾರಿಗಳ ತಂಡ ಗುಂಡು ಹಾರಿಸಿ ಬೋಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಬೋಟ್ ನಲ್ಲಿದ್ದ ಜನರನ್ನು ಹಾಗೂ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.