Saturday, April 19, 2025
Homeಮುಲ್ಕಿಪಲಿಮಾರು ಮಠ ಶ್ರೀ ಬಾಲಾಜಿ ಸನ್ನಿಧಿ ಮೀರಾರೋಡು. ಬ್ರಹ್ಮ ಕಲಶೋತ್ಸವ

ಪಲಿಮಾರು ಮಠ ಶ್ರೀ ಬಾಲಾಜಿ ಸನ್ನಿಧಿ ಮೀರಾರೋಡು. ಬ್ರಹ್ಮ ಕಲಶೋತ್ಸವ

ಉತ್ಕೃಷವಾದ ಜ್ಞಾನ ಹೊಂದಲು ಹೊರಗಿನ ಮಡಿಗಿಂತಲೂ ಒಳಗಿನ ಮಡಿ ಪವಿತ್ರವಾಗಿವೆ. ಬಾಹ್ಯ ಸೌಂದರ್ಯಕ್ಕೆ ಅದ್ಯತೆ ನೀಡದೆ ಅಂತಃರಂಗದ ಶುಚಿತ್ವದಿಂದ ಭಗವಂತನನ್ನು ಅರಾಧಿಸಬೇಕು. ಮಠ, ಮಂದಿರಗಳ ಪ್ರತಿಷ್ಠಾದಿ ಉತ್ಸವಗಳನ್ನು ಮಾಡುವುದರ ಹಿಂದೆ ಆತ್ಮ ಸಾಕ್ಷಾತ್ಕಾರದ ಒಳಮರ್ಮವಿದೆ. ಆಗಮ ಶಾಸ್ತ್ರದ ವಿಧಿ ವಿಧಾನದಂತೆ ಪ್ರತಿ 12 ವರ್ಷಗಳಿಗೊಮ್ಮೆ ದೋಷ ನಿವಾರಣೆಗೆ ಬಿಂಬವನ್ನು ಅಷ್ಟಬಂಧ ದ್ರವ್ಯಾದಿಗಳಿಂದ ಗಟ್ಟಿಗೊಳಿಸಲಾಗುವುದು. ಬ್ರಹ್ಮಕಲಶೋತ್ಸವ ಧರ್ಮಜೀವನಕ್ಕೆ ಒಂದು ಮೆಟ್ಟಿಲಾಗಿ ಫಲ ನೀಡುತ್ತದೆ. ಕಲಶೋತ್ಸವ ದೇವರಿಗೆ ಮಾಡುವ ಮೂಲಕ ನಮ್ಮ ಬದುಕನ್ನು ಪಾವನ ಗೊಳಿಸಲು ಸಾಧ್ಯವಿದೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು.

ಮೀರಾರೋಡು ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಮಾ. 17 ರಂದು ಸನ್ನಿಧಿಯ ಅಷ್ಟಬಂಧ ಬ್ರಹ್ಮಕಲಶೋತ್ಸವನ್ನು ನೆರವೇರಿಸಿ ಆಶೀರ್ವಚನ ನೀಡಿ ಸನಾತನ ಧರ್ಮ ಸಂಸ್ಕೃತಿ ಅವಿಭಾಜ್ಯ ಅಂಗ ಆಗಿದ್ದರೆ ನಮ್ಮ ಬದುಕು ಸುಂದರವಾಗಿರುತ್ತದೆ . ಸ್ವಾರ್ಥ ಬಿಟ್ಟು ಸತತ ಧ್ಯಾನ ಸಾಧನೆಯಿಂದ ಭಗವಂತನ ಸಾಮಿಪ್ಯ ಹೊಂದಿದರೆ ಮೋಕ್ಷ ಸಾಧ್ಯವಾಗಲಿದೆ. ಪ್ರತಿಷ್ಥಾಪನೆ ಮಹೋತ್ಸವವು ಪಲಿಮಾರು ಮಠದ ಟ್ರಸ್ಟಿ ಸಚ್ಚಿದಾನಂದ ರಾವ್ ಅವರ ನೇತ್ರತ್ವದಲ್ಲಿ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಿ ಭಕ್ತಾಧಿಗಳಿಗೆ ಮಂತ್ರಾಕ್ಷೆಯ ಮೂಲಕ ಹರಸಿದರು.

ಇದೇ ಸಂಧರ್ಭದಲ್ಲಿ 70 ಸಂವತ್ಸರಗಳನ್ನು ಪೂರೈಸಿದ ಪಲಿಮಾರು ಶ್ರೀಗಳ ಆರೋಗ್ಯ ವರ್ಧನೆಗಾಗಿ ಅವರ ಸೇವೆ ಸರ್ವವ್ಯಾಪಿಯಾಗಲು ಧನ್ವಂತರಿ ಹೋಮ ಮತ್ತು ಪೂರ್ಣ ಕುಂಭಾಷೇಕದ ತೀಥಾಭಿಷೇಕ ಮಾಡಲಾಯಿತು.

ಮುಂಬೈಯಾದ್ಯಂತ ನೆಲೆಸಿರುವ ಭಕ್ತರಿಗೆ ತಿರುಪತಿ ದರ್ಶನ ಕಠಿಣ ಎಂಬ ವಿಚಾರಧಾರೆಯನ್ನು ಪರಿಗಣಿಸಿ ಸ್ವಾಮೀಜಿಯವರು ಭಕ್ತರಿಗೆ ಅನುಕೂಲವಾಗಲೆಂದೇ ತಿರುಪತಿಯಿಂದಲೇ ಸುಮಾರು ಆರು ಅಡಿ ಎತ್ತರದ ಮೂರ್ತಿಯನ್ನು ತಂದು ವಿಧ್ಯುಕ್ತವಾಗಿ ಮೀರಾ ರೋಡ್ ಗೀತಾ ನಗರದಲ್ಲಿ 2013ರಲ್ಲಿ ಬಾಲಾಜಿ ಸನ್ನಿಧಿಯನ್ನು ಪ್ರತಿಷ್ಠಾಪಿಸಿದರು. ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಅವರ ಸಲಹೆ ನಿರ್ದೇಶನದಂತೆ ಇಂದಿನ ಪ್ರತಿಯೊಂದು ಅಧ್ಯಾತ್ಮಿಕ ,ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಿದೆ. ಸುಮಾರು 35 ಕ್ಕೂ ಹೆಚ್ಚು ಹೊರೆಕಾಣಿಕೆ ನೀಡಿದ ಸಂಘ ಸಂಸ್ಥೆಗಳಿಗೆ, ಮಹಾ ಪೋಷಕರಿಕೆ, ಶ್ರೀ ಬಾಲಾಜಿ ಪ್ರತಿಷ್ಠಾನ ಸಮಿತಿ, ಶ್ರೀಬಾಲಾಜಿ ಭಜನ ಮಂಡಳಿ, ಸನ್ನಿಧಿಧಾನದಲ್ಲಿ ನಿರಂತರವಾಗಿ ಭಜನೆ ಸೇವೆ ಮಾಡುವ ಭಜನ ಮಂಡಳಿಗಳ ಕಾರ್ಯ ವೈಖರಿ ಶ್ಲಾಘನೀಯ. ಅವರಿಗೆಲ್ಲ ಅನಂತ ಕೃತಜ್ಞೆಗಳು. ಧರ್ಮಕ್ಕಾಗಿ ತ್ಯಾಗ ಮನೋಭಾವದಿಂದ ಕೆಲಸಮಾಡುವ ಪ್ರವೃತ್ತಿ ತಮ್ಮದಾಗಲಿ ಸಚ್ಚಿದಾನಂದ ರಾವ್ ,ಟ್ರಸ್ಟಿ ಪಲಿಮಾರು ಮಠ ಮೀರಾರೋಡು.

ತಂತ್ರಿ ರಾಜ್ ಗೋಪಾಲ್ ಉಪಾಧ್ಯಾಯ ಅವರ ನೇತ್ರತ್ವದಲ್ಲಿ ಬೆಳಿಗ್ಗೆ ತತ್ವ ಹೋಮ, ತತ್ವಕಲಶ, ಕಲಶಾಧಿವಾಸ ಹೋಮ, ಶತಕಲಶ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ, ಅವಸ್ರುತ ಬಲಿ, ಅನ್ನ ಸಂತರ್ಪಣೆ ಸಾಯಂಕಾಲ ರಥೋತ್ಸವ, ಉತ್ಸವ ಬಲಿ, ರಂಗಪೂಜೆ ನೆರವೇರಿತು.

ವಿದ್ವಾನ್ ರಮನ್ ಆಚಾರ್ಯ, ಹೃಷಿಕೇಶ್ ಐತಾಳ, ನವನೀತ ಐತಾಳ,ಉದಯಕುಮಾರ್, ಗೋಪಾಲ ಭಟ್, ಚಂದ್ರಕಾಂತ ತಂತ್ರಿ, ಶೀನಿವಾಸ ನಕ್ಷತ್ರಿ, ಕ್ರಷ್ಣ ಉಡುಪ, ಗಣೇಶ ಭಟ್, ಅನಂತ ಭಟ್,ಗಣೇಶ್ ಭಟ್,ಸಂತೋಷ್ ಭಟ್, ಶ್ರೀಶಾ ಭಟ್, ಶ್ರೀಹರಿ, ಗಿರೀಶ್ ಉಪಾಧ್ಯಾಯ, ಪೌರೋತ್ಯದಲ್ಲಿ ಪಾಲ್ಗೊಂಡರು. ಕರಮಚಂದ್ರ ಗೌಡ ,ಬಾಲಾಜಿ ಭಜನ ಮಂಡಳಿ, ಬಾಲಾಜಿ ಪ್ರತಿಷ್ಠ ಸಮಿತಿಯ ಗೌರವ ಅಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುಮತಿ ಶೆಟ್ಟಿ , ಪರಿಸರದ ಸಂಘ ಸಂಸ್ಥೆಯ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

RELATED ARTICLES
- Advertisment -
Google search engine

Most Popular