Sunday, July 14, 2024
Homeಧಾರ್ಮಿಕಪಲಿಮಾರು ದೇಗುಲ: ರಥಾರೋಹಣ

ಪಲಿಮಾರು ದೇಗುಲ: ರಥಾರೋಹಣ

ಪಡುಬಿದ್ರಿ: ಪಲಿಮಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಧರ್ಮಶಾಸ್ತ್ರ ದೇವಸ್ಥಾನದಲ್ಲಿ ಈ ಬಾರಿಯ ಶ್ರೀ ದೇವರ ರಥೋತ್ಸವವು ಮಾ. 12ರಂದು ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀಗಳಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ಶುಭ ಆಶೀರ್ವಾದದೊಂದಿಗೆ ಜರಗಲಿರುವುದು. ಮಾ. 8ರಂದು ಬೆಳಗ್ಗೆ 10ಕ್ಕೆ ಧ್ವಜಾರೋಹಣ, ಮಾ. 12ರಂದು ಮಧ್ಯಾಹ್ನ 11.30ಕ್ಕೆ ರಥಾರೋಹಣ, ಮಧ್ಯಾಹ್ನ 1 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಮಾ. 13ರಂದು ಬೆಳಗ್ಗೆ ಸೂರ್ಯೋದಯಕ್ಕೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಸಂಜೆ 6ರಿಂದ ಸಾರ್ವಜನಿಕ ಹರಕೆ ಹೂವಿನ ಪೂಜೆ, ರಾತ್ರಿ 9ಕ್ಕೆ ಧ್ವಜಾವರೋಹಣವು ನಡೆಯಲಿರುವುದಾಗಿ ಶ್ರೀ ದೇಗುಲದ ಪ್ರಕಟನೆ ತಿಳಿಸಿದೆ.

RELATED ARTICLES
- Advertisment -
Google search engine

Most Popular