Monday, January 20, 2025
Homeಮಂಗಳೂರುಪಣಂಬೂರು : ಅಪಾಯಕ್ಕೆ ಸಿಲುಕಿದ್ದ ದೋಣಿ, ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್

ಪಣಂಬೂರು : ಅಪಾಯಕ್ಕೆ ಸಿಲುಕಿದ್ದ ದೋಣಿ, ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್

ಸುರತ್ಕಲ್: ಎಂಜಿನ್ ವೈಫಲ್ಯದಿಂದ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಮೀನುಗಾರಿಕೆ ದೋಣಿಯನ್ನು ಪಣಂಬೂರು ಕೇಂದ್ರೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ. ಕಾರವಾರ ಮೂಲದ ವ್ಯಕ್ತಿಗೆ ಸೇರಿದ್ದ ಮೀನುಗಾರಿಕೆ ದೋಣಿಯನ್ನು ಕೋಸ್ಟ್ ಗಾರ್ಡ್ ನ ಸಾವಿತ್ರಿಬಾಯಿ ಫುಲೆ ನೌಕೆ ಪತ್ತೆ ಹಚ್ಚಿ ಮೀನುಗಾರರ ಸಹಿತ ರಕ್ಷಿಸಿದೆ.
ಏ 14ರಂದು ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿ ಎಂಜಿನ್ ವೈಫಲ್ಯದಿಂದ ಸಮುದ್ರದಲ್ಲಿ ಸಿಲುಕಿತ್ತು. ದೋಣಿಯ ಸಿಬ್ಬಂದಿ ಕರೆ ಮಾಡಿ ನೆರವನ್ನು ಕೋರಿದ್ದ ಹಿನ್ನೆಲೆಯಲ್ಲಿ ಕಾರವಾರ ಜಿಲ್ಲಾ ಮೀನುಗಾರಿಕೆ ಇಲಾಖೆ ನೆರವಿಗೆ ಧಾವಿಸುವಂತೆ ಕೋಸ್ಟ್ ಗಾರ್ಡ್ ಗೆ ಸೂಚಿಸಿತ್ತು.ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ದೋಣಿಗೆ ತಾಂತ್ರಿಕ ಸಹಾಯ ಒದಗಿಸಿ ಅದನ್ನು ಸುರಕ್ಷಿತವಾಗಿ ಕಾರವಾರ ಬಂದರಿಗೆ ಎಳೆದು ತಂದು ಮಾಲಕರಿಗೆ ಹಸ್ತಾಂತರಿಸಿದ್ದಾರೆ.

RELATED ARTICLES
- Advertisment -
Google search engine

Most Popular