ಮೂಡುಬಿದಿರೆ: ದೆಹಲಿಯ ರಾಣಾ ಪ್ರತಾಪ್‌ನಗರದ ಜಿನ ಬಸದಿ 24 ತೀರ್ಥಂಕರರ ಪಂಚಕಲ್ಯಾಣವು ರಾಷ್ಟ್ರ ಸಂತ 108 ಉಪಾಧ್ಯಾಯ ಗುಪ್ತಿಸಾಗರ ಮುನಿರಾಜ್ ಮಾರ್ಗದರ್ಶನ ನಡೆದಿದ್ದು, ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಭಾಗವಹಿಸಿದರು.
ಧಾರ್ಮಿಕ ಸಭೆಯಲ್ಲಿ ಸಂದೇಶ ನೀಡಿದ ಭಟ್ಟಾರಕ ಸ್ವಾಮೀಜಿ, ಜಿನಬಿಂಬ ಸ್ಥಾಪನೆ ಆತ್ಮ ಕಲ್ಯಾಣದ ಪ್ರತೀಕ. ಸಂಸ್ಕೃತಿ, ಸಂಸ್ಕಾರ, ಧರ್ಮದಿಂದ ಆತ್ಮ ಕಲ್ಯಾಣವಾಗುತ್ತದೆ ಎಂದರು. ಗುಪ್ತಿ ಸಾಗರ ಮುನಿರಾಜರು ಭಟ್ಟಾರಕ ಸ್ವಾಮೀಜಿಯವರನ್ನು ಗೌರವಿಸಿದರು.
ಭಗವಾನ್ ಮಹಾವೀರ ಜನ್ಮ ಕಲ್ಯಾಣದಂದು ನಿರ್ವಾಣ ವರ್ಷ 2550ರ ಅಂಗವಾಗಿ ಬಿಡುಗಡೆಗೊಳಿಸಿದ ನೂರು ರೂಪಾಯಿ ಮುಖಬೆಲೆಯ ನಾಣ್ಯ ಹಾಗೂ ಅಂಚೆ ಇಲಾಖೆ ಬಿಡುಗಡೆಗೊಳಿಸಿದ ಪಾವಪುರಿ ಸಿದ್ದಕ್ಷೇತ್ರ ಫಸ್ಟ್ ಡೇ ಕವರ್ ಅನ್ನು ದೆಹಲಿ ಗ್ರೀನ್‌ಪಾರ್ಕ್ ಬಸದಿಯಲ್ಲಿ ರಾಷ್ಟç ಸಂತ ಆಚಾರ್ಯ ಪ್ರಾಗ್ಯ ಸಾಗರ ಮುನಿಮಹಾಜರು, ಭಟ್ಟಾರಕ ಸ್ವಾಮೀಜಿಯವರಿಗೆ ನೀಡಿ ಹರಸಿದರು.