ವಿಟ್ಲ : 8 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭಗವಾನ್ 1008 ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ದೇವಸ್ಥಾನವು ಈಗ ನವಿಲು ದೇವಸ್ಥಾನವಾಗಿದೆ. ಈ ದೇಗುಲದಲ್ಲಿ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಹಾಗೂ ಶ್ರೀ ಯಕ್ಷಿ ಪದ್ಮಾವತಿ ಅಮ್ಮನವರ ಮತ್ತು ಶ್ರೀ ಯಕ್ಷಿ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠೆ ಮಹೋತ್ಸವ ಫೆ. 13ರಿಂದ 17ರ ತನಕ ನಡೆಯಲಿದೆ.
ಬಸದಿ ವಿಶೇಷ ಈ ಬಸದಿಯನ್ನು ರಾಷ್ಟ್ರ ಪಕ್ಷಿ ನವಿಲಿನ ಆಕಾರದಲ್ಲಿ ನಿರ್ಮಿಸಲಾಗಿದೆ. ವಾಸ್ತು, ಶಾಸ್ತ್ರ ಸಂಪ್ರದಾಯಕ್ಕೆ ಚ್ಯುತಿ ಬರದಂತೆ, ಆಧುನಿಕ ತಂತ್ರಜ್ಞಾನಗಳನ್ನು ಹೊಂದಿದ ಈ ಜೈನಬಸದಿ, ನವಿಲು ದೇವಸ್ಥಾನವಾಗಿ ಪರಿಚಯವಾಗಲಿದೆ.
ತೀರ್ಥಂಕರರು, ದೇವರ ಪ್ರತಿಷ್ಠೆ ಈ ಬಸದಿಯಲ್ಲಿ 8ನೇ ತೀರ್ಥಂಕರರನ್ನು ಸ್ಥಾಪಿಸಲಾಗಿದ್ದು, ನೂತನ ವಿಗ್ರಹವನ್ನು ಪಂಚಲೋಹದಿಂದ ನಿರ್ಮಿಸಲಾಗಿದೆ. ಪಾರ್ಶ್ವನಾಥ ಸ್ವಾಮಿಯ ವಿಗ್ರಹ ಮತ್ತು ಮಹಾವೀರ ಸ್ವಾಮಿಯ ವಿಗ್ರಹಗಳನ್ನು ಶಿಲೆಯಿಂದ ನಿರ್ಮಿಸಲಾಗಿದೆ. ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಬಿಂಬ ಪ್ರತಿಷ್ಠೆ ನಡೆಸಲಾಗುತ್ತದೆ.
ಶ್ರೀ ಯಕ್ಷಿ ಪದ್ಮಾವತಿ ಅಮ್ಮನವರ ಮತ್ತು ಶ್ರೀ ಯಕ್ಷಿ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠೆ ಮಹೋತ್ಸವ ಫೆ. 13ರಿಂದ 17ರ ತನಕ ನಡೆಯಲಿದೆ. ಅದಕ್ಕಾಗಿ ವಿಟ್ಲ ಸರ್ವ ಸನ್ನದ್ದವಾಗಿದೆ.