ಬಂಟ್ವಾಳ:ಇಲ್ಲಿನ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದಲ್ಲಿ ಒಟ್ಟು 13 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಸಹಕಾರ ಪ್ರಕೋಷ್ಠದ ೧೩ ಮಂದಿ ಅಭ್ಯರ್ಥಿಗಳು ಗೆದ್ದು ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ.
ಸಂಘದ ಮಾಜಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಸೇರಿದಂತೆ ಪ್ರದೀಪ್ ಶೆಟ್ಟಿ, ಜ್ಞಾನೇಶ್ವರ ಪ್ರಭು, ಲಿಂಗಪ್ಪ ಎಸ್., ಅರವಿಂದ ಭಟ್, ಯಶವಂತ ದೇರಾಜೆ, ಮೋಹಿನಿ ಶೆಟ್ಟಿ, ಮಮತಾ ಶಂಭೂರು, ನಾರಾಯಣ ಪೂಜಾರಿ, ವಿಜಯ ರೈ, ರತ್ನ ನರಿಕೊಂಬು, ನಾಗಪ್ಪ ನಾಯ್ಕ್, ಗಣೇಶ ಕುಮಾರ್ ನರಿಕೊಂಬು ಆಯ್ಕೆಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.