Tuesday, December 3, 2024
Homeಧಾರ್ಮಿಕಪಣೋಲಿಬೈಲು: 24 ರಂದು ವಾರ್ಷಿಕ ಕೋಲ

ಪಣೋಲಿಬೈಲು: 24 ರಂದು ವಾರ್ಷಿಕ ಕೋಲ


ಬಂಟ್ವಾಳ:ಇಲ್ಲಿನ ಕಾರಣಿಕ ಪ್ರಸಿದ್ಧ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಇದೇ ೨೩ರಿಂದ ೨೪ರತನಕ ವರ್ಷಾವಧಿ ಕೋಲ ಮತ್ತಿತರ ಕಾರ್ಯಕ್ರಮಗಳು ಕ್ಷೇತ್ರದ ಸಂಪ್ರದಾಯದಂತೆ ನೆರೆವೇರಲಿದೆ ಎಂದು ಆಡಳಿತಾಕಾರಿ, ತಹಸೀಲ್ದಾರ್ ಡಿ. ಅರ್ಚನಾ ಭಟ್ ತಿಳಿಸಿದ್ದಾರೆ.
ಇದೇ ೨೩ರಂದು ಸಂಜೆ ಕೊಪ್ಪರಿಗೆ ಮುಹೂರ್ತ, ಕುಣಿತ ಭಜನೆ, ದೀಪ ಪ್ರಜ್ವಲನೆ, ನೃತ್ಯಾರಾಧನೆ ಬಳಿಕ ನಾಟಕ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಇದೇ ೨೪ರಂದು ಬೆಳಿಗ್ಗೆ ನವಕ ಕಲಶಪ್ರದನ, 12 ತೆಂಗಿನಕಾಯಿ ಗಣಹೋಮ, ನಾಗತಂಬಿಲ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಬಳಿಕ ಭಜನಾ ಸಂಕೀರ್ತನೆ, ಸಂಜೆ ಪಣೋಲಿಬೈಲು ಶ್ರೀಕೃಷ್ಣ ಮಂದಿರದಲ್ಲಿ ಭಜನಾ ಸಂಕೀರ್ತನೆ ಬಳಿಕ ಮೆರವಣಿಗೆ, ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ವೈವಿಧ್ಯ, ಗೀತ ಸಾಹಿತ್ಯ ಸಂಭ್ರಮ, ಭಂಡಾರದಮನೆಯಿಂದ ದೈವಗಳ ಭಂಡಾರ ಬರುವುದು, ತುಳು ನಾಟಕ ಪ್ರದರ್ಶನ ಬಳಿಕ ರಾತ್ರಿ ಗಂಟೆ 12ರಿಂದ ವರ್ಷಾವಧಿ ಕೋಲ ಸೇವೆ ನಡೆಯಲಿದೆ ಎಂದು ಕಾರ್ಯನಿರ್ವಹಣಾಕಾರಿ ದಿವಾಕರ ಮುಗುಳ್ಯ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular