Sunday, July 14, 2024
Homeತುಳು ಭಾಷೆಪಣೋಲಿಬೈಲು: ದಿನವೊಂದಕ್ಕೆ 8 ಕೋಲ ಸೇವೆಗೆ ಚಾಲನೆ

ಪಣೋಲಿಬೈಲು: ದಿನವೊಂದಕ್ಕೆ 8 ಕೋಲ ಸೇವೆಗೆ ಚಾಲನೆ


ಪಣೋಲಿಬೈಲು: ದಿನವೊಂದಕ್ಕೆ 8 ಕೋಲ ಸೇವೆಗೆ ಚಾಲನೆ
ಬಂಟ್ವಾಳ: ಸಜಿಪಮೂಡ ಗ್ರಾಮದ ಕಾರಣಿಕ ಪ್ರಸಿದ್ಧ
ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ದಿನವೊಂದಕ್ಕೆ ತಲಾ 8 ಕೋಲ ಸೇವೆ ಶುಕ್ರವಾರದಿಂದ ಆರಂಭಗೊಂಡಿದೆ.
ಸಜಿಪ ಮಾಗಣೆ ಶ್ರೀ ನಡಿಯೇಲು ದೈಯ್ಯಂಗುಲು ದೈವದ ಅಪ್ಪಣೆಯಂತೆ ಪಣೋಲಿಬೈಲು ಕಲ್ಲುರ್ಟಿ ದೈವದ ಒಪ್ಪಿಗೆ ಪಡೆದು ಶುಕ್ರವಾರ 8 ಕೋಲ ಸೇವೆ ನಡೆಯಿತು.
ಈಗಾಗಲೇ 22 ಸಾವಿರ ಕೋಲ ಸೇವೆ ಕಾದಿರಿಸಲಾಗಿದ್ದು, ಪ್ರಸಕ್ತ 2006 ನೇ ವರ್ಷ ಭಕ್ತರು ಕಾದಿರಿಸಿದ ಕೋಲ ಸೇವೆ ನಡೆಯುತ್ತಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯಡಿ ಗರಿಷ್ಟ ಪ್ರಮಾಣದಲ್ಲಿ ಸರ್ಕಾರಕ್ಕೆ ಆದಾಯ ತರುವ ದೈವಸ್ಥಾನವಾಗಿ ಪಣೋಲಿಬೈಲು ಕ್ಷೇತ್ರ ಗುರುತಿಸಿಕೊಂಡಿದೆ.

RELATED ARTICLES
- Advertisment -
Google search engine

Most Popular