Monday, July 15, 2024
Homeಉಡುಪಿಮಾಹೆಯಿಂದ ತನ್ನ ಆನ್‌ಲೈನ್‌ ಶಿಕ್ಷಣಾರ್ಥಿಗಳಿಗಾಗಿ ಪನೋರಮ-2024 ಆಯೋಜನೆ

ಮಾಹೆಯಿಂದ ತನ್ನ ಆನ್‌ಲೈನ್‌ ಶಿಕ್ಷಣಾರ್ಥಿಗಳಿಗಾಗಿ ಪನೋರಮ-2024 ಆಯೋಜನೆ


ಮಣಿಪಾಲ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್ ಎಜುಕೇಶನ್‌ [ಮಾಹೆ] ತನ್ನ ಸಂಯೋಜಿತ ಪದವಿ [ಆನ್‌ಲೈನ್‌ ಡಿಗ್ರಿ] ಮತ್ತು ವಿಷಯ ಕೇಂದ್ರಿತ ಪದವಿ [ಸರ್ಟಿಫಿಕೇಟ್‌ ಕೋರ್ಸ್‌] ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ವಿಶೇಷವಾದ ‘ಪನೋರಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಆನ್‌ಲೈನ್‌ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ನೇರವಾಗಿ ಇದರಲ್ಲಿ ಉಪಸ್ಥಿತರಿದ್ದರು. ಮಣಿಪಾಲದ ಮಾಹೆ ಕ್ಯಾಂಪಸ್‌ನಲ್ಲಿ ಜೂನ್‌ 22, 2024 ರಂದು ಜರಗಿದ ಈ ಕಾರ್ಯಕ್ರಮದಲ್ಲಿ ಸುಮಾರು 300 ಮಂದಿ ದೇಶಾದ್ಯಂತದ ವಿದ್ಯಾರ್ಥಿಗಳು ಪಾಲ್ಗೊಂಡು, ತಮ್ಮ ಬೋಧಕರು ಮತ್ತು ಸಹಪಾಠಿಗಳನ್ನು ಭೇಟಿಯಾಗುವ ಅವಕಾಶ ಪಡೆದರು. ಎಂಬಿಎ, ಎಂಎಸ್ಸಿ-ಉದ್ಯಮ ವಿಶ್ಲೇಷಕ, ಎಂಎಸ್ಸಿ-ದತ್ತಕ ವಿಜ್ಞಾನ [ಡಾಟಾ ಸಾಯನ್ಸ್‌], ಪಿಜಿಸಿಪಿ ಉದ್ಯಮ ವಿಶ್ಲೇಷಕ [ಬಿಸಿನೆಸ್‌ ಎನಲಿಟಿಕ್ಸ್‌], ಪಿಜಿಸಿಪಿ- ವ್ಯವಸ್ಥಾತಂತ್ರ ಮತ್ತು ಪೂರೈಕೆ ಸರಪಳಿ ನಿರ್ವಾಹಕ [ಲಾಜಿಸ್ಟಿಕ್ಸ್‌ & ಸಪ್ಲೈ ಚೈನ್‌ ಮ್ಯಾನೇಜ್‌ಮೆಂಟ್‌] ವಿಭಾಗದ ವಿದ್ಯಾರ್ಥಿಗಳು ಈ ಪೂರ್ಣದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮಾಹೆಯ ಸಂಯೋಜಿತ ಶಿಕ್ಷಣ ನಿರ್ದೇಶನಾಲಯ [ಡೈರೆಕ್ಟೋರೇಟ್‌ ಆಫ್‌ ಆನ್‌ಲೈನ್‌ ಎಜುಕೇಶನ್‌] ದ ನಿರ್ದೇಶಕ ಡಾ. ಮನೋಜ್‌ ಕುಮಾರ್‌ ನಾಗಸಂಪಿಗೆ ಆರಂಭದಲ್ಲಿ ಸ್ವಾಗತ ಮತ್ತು ಪ್ರಸ್ತಾವನೆ ಮಾಡುತ್ತ, ‘ಆನ್‌ಲೈನ್‌ ಶಿಕ್ಷಣಾರ್ಥಿಗಳಿಗಾಗಿ ಈ ರೀತಿಯ ಕಾರ್ಯಕ್ರಮವನ್ನು ಮೊದಲಬಾರಿಗೆ ಸಂಯೋಜಿಸುತ್ತಿದ್ದೇವೆ. ಇದು ವಿದ್ಯಾರ್ಥಿಗಳ ನಡುವೆ ಸೌಹಾರ್ದ ಸಂಬಂಧ ಮತ್ತು ಅನುಭವಗಳ ವಿನಿಮಯಕ್ಕೆ ವೇದಿಕೆಯಾಗಲಿದೆ’ ಎಂದರು.
ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ-ಉಪಕುಲಪತಿಗಳಾದ ಡಾ. ನಾರಾಯಣ ಸಭಾಹಿತ್‌ ಅವರು ಮಾತನಾಡಿ, ‘ಮಾಹೆಯ ಆನ್‌ಲೈನ್‌ ಶಿಕ್ಷಣ ಮಾದರಿ ಅತ್ಯುತ್ಕೃಷ್ಟವಾಗಿದ್ದು, ‘ಪನೋರಮ’ ಕಾರ್ಯಕ್ರಮವು ಈ ಮಾದರಿಗೆ ಇನ್ನಷ್ಟು ಮೌಲ್ಯವನ್ನು ಒದಗಿಸಲಿದೆ. ಈ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಖುದ್ದಾಗಿ ಸಂವಹನ ಮತ್ತು ಸಂವಾದದಲ್ಲಿ ಪಾಲ್ಗೊಳ್ಳುವಂತಾಗಿದೆ’ ಎಂದರು.
ಮಾಹೆಯ ಕುಲಸಚಿವ [ರಿಜಿಸ್ಟ್ರಾರ್‌] ಡಾ. ಪಿ. ಗಿರಿಧರ ಕಿಣಿ ಅವರು ಮಾತನಾಡಿ, ‘ವೃತ್ತಿಪರರಿಗೆ ಆನ್‌ಲೈನ್‌ ಪದವಿ ಶಿಕ್ಷಣ ಮಾದರಿಯು ಪ್ರಯೋಜನಕಾರಿಯಾಗಲಿದೆ. ಆನ್‌ಲೈನ್‌ ಶಿಕ್ಷಣವು ನಮ್ಯವಾದ [ಫ್ಲೆಕ್ಸಿಬಲ್‌] ಮತ್ತು ಗುಣಮಟ್ಟದ ವಿಪುಲ ಅವಕಾಶಗಳನ್ನು ಒದಗಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಹೆಸರು ಗಳಿಸಿರುವ ಮಾಹೆಯು ಆನ್‌ಲೈನ್‌ ಮಾದರಿಯ ಶಿಕ್ಷಣದಲ್ಲಿಯೂ ಗುಣಮಟ್ಟವನ್ನು ಉಳಿಸಿಕೊಂಡು ಮುಂದೆ ಸಾಗುತ್ತಿದೆ ಮತ್ತು ಈ ಪ್ರಯಾಣದಲ್ಲಿ ನಿಮ್ಮನ್ನು ಬೆಂಬಲಿಸಲು ನಾವು ರೋಮಾಂಚನಗೊಂಡಿದ್ದೇವೆ’ ಎಂದರು.
ಪ್ರಸ್ತುತ ಆನ್‌ಲೈನ್‌ ಪ್ರಶಿಕ್ಷಣ [ಪ್ರೋಗ್ರಾಮ್‌]ದಲ್ಲಿ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆಯನ್ನು ಮಾಡಿದ ಒಂದು ಮತ್ತು ಎರಡನೆಯ ತಂಡದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ‘ಚತುರ ಉದ್ಯಮ: ಕೃತಕ ಬುದ್ಧಿಮತ್ತೆಯ ಜೊತೆಗೆ ಆಧುನಿಕ ಉದ್ಯಮದ ಕ್ರಾಂತಿ’ [‘ಸ್ಮಾರ್ಟ್‌ ಬಿಸಿನೆಸ್‌: ರೆವಲ್ಯೂಶನೈಸಿಂಗ್‌ ಮಾಡರ್ನ್‌ ಬಿಸಿನೆಸ್‌ ವಿಥ್‌ ಎಐ] ಸಂವಾದ ಕಾರ್ಯಕ್ರಮದಲ್ಲಿ ಪ್ರೊ. ರಿಚಾ ಹಿಂಡೆ, ಪ್ರೊ. ಸುದರ್ಶನ್‌ ಆಚಾರ್ಯ, ಡಾ. ಆಶಾ ಕಾಮತ್‌, ಅರುಣ್‌ ವತ್ಸ, ಪ್ರೊ. ಗ್ಯಾಂಗ್‌ ಲಿ. ಅವರು ಭಾಗವಹಿಸಿದರು. ಆಧುನಿಕ ಕಾಲದ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆ [ಎಐ] ಯ ಪಾತ್ರದ ಬಗ್ಗೆ ಸಂವಾದ ಕಾರ್ಯಕ್ರಮವು ಅತ್ಯುತ್ತಮ ಮಾಹಿತಿಯನ್ನು ಶಿಕ್ಷಣಾರ್ಥಿಗಳಿಗೆ ನೀಡಿತು. ವ್ಯಕ್ತಿಗತವಾಗಿ ಭೇಟಿಯಾಗುವುದರ ಮೂಲಕ ಅನುಭವ ವಿಸ್ತರಣೆಗೆ ಅವಕಾಶ ನೀಡಿದ ‘ಪನೋರಮ’ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಹೆ ಕ್ಯಾಂಪಸ್‌ನ ಮಾರ್ಗದರ್ಶಿ ಪ್ರವಾಸದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.
ಮಾಹೆಯಲ್ಲಿ ಆನ್‌ಲೈನ್‌ ವಿದ್ಯಾರ್ಥಿಗಳಿಗೆ ಇಂಥ ಕಾರ್ಯಕ್ರಮವನ್ನು ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ವೈಯಕ್ತಿಕ ಮತ್ತು ವೃತ್ತಿಪರ ನೆಲೆಗಳಲ್ಲಿ ಸಂಪರ್ಕವನ್ನು ಬೆಳೆಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಈ ಮೂಲಕ ವಿವಿಧ ರಾಜ್ಯಗಳ ಆನ್‌ಲೈನ್‌ ಶಿಕ್ಷಣಾರ್ಥಿಗಳು ಪರಸ್ಪರ ಸಂಬಂಧವನ್ನು ಬೆಳೆಸಿಕೊಳ್ಳಲು ಅವಕಾಶವನ್ನು ಒದಗಿಸುವುದು ಈ ಕಾರ್ಯಕ್ರಮದ ಆಶಯವಾಗಿದೆ.

ವಿದ್ಯಾರ್ಥಿಗಳ ಪ್ರಶಂಸಾ ನುಡಿಗಳು :
“ನನ್ನ ಗೆಳೆಯರು ಮತ್ತು ಅಧ್ಯಾಪಕರನ್ನು ವೈಯಕ್ತಿಕವಾಗಿ ಭೇಟಿಯಾಗುವುದು ಅದ್ಭುತ ಅನುಭವ. ನಾನು ಹೆಚ್ಚು ಸಂಪರ್ಕ ಮತ್ತು ಪ್ರೇರಣೆ ಹೊಂದಿದ್ದೇನೆ.

  • ವಿದ್ಯಾರ್ಥಿ 1, ಎಂಬಿಎ ಕಾರ್ಯಕ್ರಮ
  • “ಈವೆಂಟ್ ಎಲ್ಲರೊಂದಿಗೆ ಸಂವಾದ ಮಾಡಲು ಮತ್ತು ಹೊಸ ಒಳನೋಟಗಳನ್ನು ಪಡೆಯಲು ಅದ್ಭುತ ಅವಕಾಶವಾಗಿದೆ. ಈ ಅನುಭವಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ”
    – ವಿದ್ಯಾರ್ಥಿ 2, MSc ಡೇಟಾ ಸೈನ್ಸ್ ಪ್ರೋಗ್ರಾಂ

RELATED ARTICLES
- Advertisment -
Google search engine

Most Popular